ಶನಿವಾರ, ಜುಲೈ 2, 2022
25 °C
ಕೆಎಸ್‌ಎಲ್‌ಟಿಎ ಆಯೋಜಿಸಿರುವ ಎಸ್‌ಕೆಎಂಇ ಐಟಿಎಫ್‌ ಟೂರ್ನಿ; ಜುಲಿಯನ್ ಜೊತೆಗೂಡಿ ಗೆಲುವು

ಅರ್ಜುನ್‌ಗೆ ‘ಡಬಲ್’ ಪ್ರಶಸ್ತಿ ಮೇಲೆ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತದ ಅರ್ಜುನ್ ಖಾಡೆ ಮತ್ತು ಬ್ರಿಟನ್‌ನ ಜುಲಿಯನ್ ಕ್ಯಾಶ್ ಜೋಡಿ ಕರ್ನಾಟಕ ರಾಜ್ಯ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಎಸ್‌ಕೆಎಂಇ ಐಟಿಎಫ್‌ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಶನಿವಾರ ನಡೆದ ಫೈನಲ್‌ನಲ್ಲಿ ಅರ್ಜುನ್ ಮತ್ತು ಜುಲಿಯನ್ 7-6 (5), 3-6, 10-7ರಲ್ಲಿ ಭಾರತದ ಜೋಡಿ ಶಶಿಕುಮಾರ್ ಮುಕುಂದ್ ಮತ್ತು ವಿಷ್ಣುವರ್ಧನ್ ಅವರನ್ನು ಮಣಿಸಿದರು.

ಸಿಂಗಲ್ಸ್ ವಿಭಾಗದ ಫೈನಲ್‌ಗೂ ಅರ್ಜುನ್ ಖಾಡೆ ಲಗ್ಗೆ ಇರಿಸಿದ್ದು ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿದ್ಧಾರ್ಥ್ ರಾವತ್ ವಿರುದ್ಧ ಸೆಣಸುವರು. ಅರ್ಜುನ್ ಖಾಡೆ ಟೂರ್ನಿಯಲ್ಲಿ ‘ಡಬಲ್’ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.  

ಸಿಂಗಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಅರ್ಜುನ್ ಖಾಡೆ ಪೋಲೆಂಡ್‌ನ ಮಾರ್ಕ್ಸ್‌ ಕಸ್ನಿಕೊವ್‌ಸ್ಕಿ ವಿರುದ್ಧ 3-6, 6-4, 6-2ರಲ್ಲಿ ಜಯ ಸಾಧಿಸಿದರು. ಸಿದ್ಧಾರ್ಥ್ ರಾವತ್ 6-2, 7-5ರಲ್ಲಿ ಮನೀಷ್‌ ಸುರೇಶ್ ಕುಮಾರ್ ವಿರುದ್ಧ ಗೆದ್ದರು. ಫೈನಲ್ ಪಂದ್ಯ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು