ಇಂಡಿಯನ್ ವೆಲ್ಸ್‌ ಟೆನಿಸ್ ಟೂರ್ನಿ: ನಡಾಲ್‌, ಫೆಡರರ್‌ ಮುಖಾಮುಖಿ?

ಶನಿವಾರ, ಮಾರ್ಚ್ 23, 2019
31 °C
ಸೆಮಿಫೈನಲ್‌ನತ್ತ ವಿಶ್ವದ ‍ದಿಗ್ಗಜ ಆಟಗಾರರು

ಇಂಡಿಯನ್ ವೆಲ್ಸ್‌ ಟೆನಿಸ್ ಟೂರ್ನಿ: ನಡಾಲ್‌, ಫೆಡರರ್‌ ಮುಖಾಮುಖಿ?

Published:
Updated:
Prajavani

ಇಂಡಿಯನ್‌ ವೆಲ್ಸ್‌, ಅಮೆರಿಕ: ದಿಗ್ಗಜ ಆಟಗಾರರಾದ ಸ್ಪೇನ್‌ನ ರಫೆಲ್ ನಡಾಲ್‌ ಮತ್ತು ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಇಂಡಿಯನ್‌ ವೆಲ್ಸ್‌ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಇವರಿಬ್ಬರು ನಾಲ್ಕನೇ ಸುತ್ತಿನ ಪಂದ್ಯಗಳಲ್ಲಿ ಸುಲಭ ಜಯ ಸಾಧಿಸಿದರು. ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ನಡಾಲ್‌ ಸರ್ಬಿಯಾದ ಫಿಲಿಪ್‌ ಕ್ರಜೊನೊವಿಚ್‌ ಅವರನ್ನು 6–3, 6–4ರಿಂದ ಮಣಿಸಿದರು. ಒಂದು ತಾಸು 26 ನಿಮಿಷಗಳ ಪಂದ್ಯದಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ದಾಖಲೆಯ ಆರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್‌ ರೋಜರ್ ಫೆಡರರ್‌ ಬ್ರಿಟನ್‌ನ ಕೈಲ್‌ ಎಡ್ಮಂಡ್ ಎದುರು 6–1, 6–4ರಿಂದ ಗೆದ್ದರು. ಪಂದ್ಯ ಕೇವಲ 64 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. 

2007, 2008 ಮತ್ತು 2013ರಲ್ಲಿ ಪ್ರಶಸ್ತಿ ಗೆದ್ದಿದ್ದ ನಡಾಲ್‌ ಗಾಯದ ಸಮಸ್ಯೆಯಿಂದಾಗಿ ಕಳೆದ ವರ್ಷ ಆಡಿರಲಿಲ್ಲ. ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ನಡಾಲ್‌ ರಷ್ಯಾದ ಕರೇನ್‌ ಕಚೊನೊವ್‌ ಎದುರು ಸೆಣಸುವರು. ಕಚೊನೊವ್‌ 6–4, 7–6 (7/1)ರಲ್ಲಿ ಇಸ್ನೇರ್ ಅವರನ್ನು ಮಣಿಸಿದ್ದರು.

ಇತ್ತೀಚೆಗಷ್ಟೇ ವೃತ್ತಿ ಜೀವನದ 100ನೇ ಪ್ರಶಸ್ತಿ ಗೆದ್ದಿದ್ದ ಫೆಡರರ್ ಟೂರ್ನಿಯಲ್ಲಿ ಆರಂಭದಿಂದಲೇ ಉತ್ತಮ ಸಾಮರ್ಥ್ಯ ಮೆರೆಯುತ್ತಿದ್ದಾರೆ. ಕೈಲ್ ಎಡ್ಮಂಡ್ ಎದುರಿನ ಪಂದ್ಯದಲ್ಲೂ ಅಮೋಘ ಆಟ ಆಡಿದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರಿಗೆ ಪೋಲೆಂಡ್‌ನ ಹ್ಯೂಬರ್ಟ್‌ ಹರ್ಕಾಸ್‌ ಎದುರಾಳಿಯಾಗಿದ್ದಾರೆ. ಕೆನಡಾದ ಡೆನಿಸ್‌ ಶಪೊವಲೊವ್‌ ಎದುರು 7–6 (7/3), 2–6, 6–3ರಿಂದ ಗೆದ್ದು ಹ್ಯುಬರ್ಸ್‌ ಎಂಟರ ಘಟ್ಟಕ್ಕೆ ಪ್ರವೇಶಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !