ಶನಿವಾರ, ಜನವರಿ 18, 2020
21 °C

ಡಬ್ಲ್ಯುಟಿಎ ಟೆನಿಸ್‌ ಟೂರ್ನಿ: ಎರಡನೇ ಸುತ್ತಿಗೆ ಜ‍ಪಾನ್‌ ಆಟಗಾರ್ತಿ ಒಸಾಕ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಬ್ರಿಸ್ಬೇನ್‌: ಜ‍ಪಾನ್‌ನ ಆಟಗಾರ್ತಿ ನವೊಮಿ ಒಸಾಕ ಅವರು ಡಬ್ಲ್ಯುಟಿಎ ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಪೈಪೋಟಿಯಲ್ಲಿ ಒಸಾಕ 6–2, 6–7, 6–3ರಲ್ಲಿ ಗ್ರೀಸ್‌ನ ಮರಿಯಾ ಸಕ್ಕಾರಿ ಅವರನ್ನು ಸೋಲಿಸಿದರು. ಈ ಹೋರಾಟ ಎರಡು ಗಂಟೆ ನಡೆಯಿತು.

ಮೊದಲ ಸೆಟ್‌ನಲ್ಲಿ ನಿರಾಯಾಸವಾಗಿ ಗೆದ್ದ ಒಸಾಕ, ಎರಡನೇ ಸೆಟ್‌ನಲ್ಲಿ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದರು. ‘ಟೈ ಬ್ರೇಕರ್‌’ನಲ್ಲಿ ಎಡವಟ್ಟು ಮಾಡಿಕೊಂಡ ಅವರು ಕೈಸುಟ್ಟುಕೊಂಡರು. ಸೆಟ್‌ ಗೆದ್ದ ಸಕ್ಕಾರಿ 1–1 ಸಮಬಲ ಸಾಧಿಸಿದರು.

ಕುತೂಹಲ ಕೆರಳಿಸಿದ್ದ ಮೂರನೇ ಸೆಟ್‌ನ ಮೊದಲ ಗೇಮ್‌ನಲ್ಲೇ ಎದುರಾಳಿಯ ಸರ್ವ್‌ ಮುರಿದ ಸಕ್ಕಾರಿ ಭರವಸೆ ಮೂಡಿಸಿದ್ದರು. ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಒಸಾಕ ಇದರಿಂದ ವಿಚಲಿತರಾಗಲಿಲ್ಲ. ನಂತರದ ಗೇಮ್‌ಗಳಲ್ಲಿ ಪ್ರಾಬಲ್ಯ ಮೆರೆದ ಅವರು ಗೆಲುವಿನ ತೋರಣ ಕಟ್ಟಿದರು.

ಇತರ ಪಂದ್ಯಗಳಲ್ಲಿ ಕಿಕಿ ಬರ್ಟೆನ್ಸ್‌ 6–4, 1–6, 6–3ರಲ್ಲಿ ಡಯಾನಾ ಯಸ್ಟ್ರೆಮ್‌ಸ್ಕಾ ಎದುರೂ, ಪೆಟ್ರಾ ಕ್ವಿಟೋವಾ 2–6, 6–1, 6–0ರಲ್ಲಿ ಅನಸ್ತೇಸಿಯಾ ಪವಲ್ಯುಚೆಂಕೋವಾ ಮೇಲೂ, ಅನೆಟ್‌ ಕೊಂಥಾವೀಟ್‌ 6–4, 6–1ರಲ್ಲಿ ಹ್ಸಿ ಸು ವೀ ವಿರುದ್ಧವೂ, ಯೂಲಿಯಾ ಪುಟಿನ್‌ತ್ಸೆವಾ 6–3, 3–6, 7–5ರಲ್ಲಿ ಡೊನ್ನಾ ವೆಕಿಕ್‌ ಮೇಲೂ ಗೆದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು