ಭಾನುವಾರ, ಆಗಸ್ಟ್ 14, 2022
24 °C

ನೋವೆಂಟಿ ಓಪನ್ ಟೆನಿಸ್‌: ಬೋಪಣ್ಣ–ದಿವಿಜ್ ಪರಾಭವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹಾಲೆ, ಜರ್ಮನಿ: ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ನೋವೆಂಟಿ ಓಪನ್ ಟೆನಿಸ್ ಟೂರ್ನಿಯಿಂದ ಹೊರಬಿದ್ದಿದ್ದಾರೆ

ಇಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬೋಪಣ್ಣ–ದಿವಿಜ್ 3–6, 6–7ರಿಂದ ಬೆಲ್ಜಿಯಂನ ಸ್ಯಾಂಡರ್‌ ಗಿಲ್ಲೆ–ಜೊರಾನ್‌ ವಿಲೆಜೆನ್‌ ವಿರುದ್ಧ ಸೋಲನುಭವಿಸಿದರು.

ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತದ ಜೋಡಿಯು ಲೂಕಾಸ್ ಕುಬೋಟ್‌–ಎಡ್ವರ್ಡ್‌ ರೋಜರ್ ವ್ಯಾಸೆಲಿನ್ ಎದುರು ಗೆದ್ದು ಎಂಟರ ಘಟ್ಟ ತಲುಪಿದ್ದರು.

ಡಬಲ್ಸ್ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್ ಅರ್ಹತೆಯ ಮೇಲೆ ಬೋಪಣ್ಣ–ದಿವಿಜ್‌ ಕಣ್ಣಿಟ್ಟಿದ್ದಾರೆ. ಒಲಿಂಪಿಕ್ಸ್‌ ಪ್ರವೇಶಕ್ಕೆ ಪರಿಗಣಿಸಲು ಕಟ್‌ಆಫ್ ರ‍್ಯಾಂಕಿಂಗ್‌ಗೆ ನಿಗದಿಪಡಿಸಿದ್ದ ಜೂನ್‌ 14ರ ಅಂತ್ಯಕ್ಕೆ ಬೋಪಣ್ಣ (38) ಹಾಗೂ ದಿವಿಜ್‌ (75) ಜೊತೆಗೂಡಿ 113ನೇ ರ‍್ಯಾಂಕ್ ಗಳಿಸಿದ್ದಾರೆ.

ಕಡಿಮೆ ರ‍್ಯಾಂಕಿಂಗ್ ಹೊಂದಿರುವ ಕಾರಣ, ಇತರ ದೇಶಗಳು ಟೋಕಿಯೊ ಕೂಟದಿಂದ ಹಿಂದೆ ಸರಿದರೆ ಭಾರತದ ಜೋಡಿಯ ಅರ್ಹತೆಯ ಕನಸು ನನಸಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು