ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್‌ ಟೆನಿಸ್‌ ಕಣಕ್ಕೆ ಒಸಾಕ

Last Updated 31 ಜುಲೈ 2020, 12:36 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಎರಡು ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌, ಜಪಾನ್‌ನ ನವೊಮಿ ಒಸಾಕ ಅವರು ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಒಸಾಕ ಅವರ ಕಾರ್ಯದರ್ಶಿ ಸ್ಟುವರ್ಟ್‌ ಡಗ್ವಿಡ್ ಗುರುವಾರ ಈ ವಿಷಯ ತಿಳಿಸಿದ್ದಾರೆ.

‘ಅಮೆರಿಕ ಟೆನಿಸ್‌ ಸಂಸ್ಥೆಯು ಫ್ಲಶಿಂಗ್‌ ಮಿಡೋಸ್‌ನಲ್ಲಿ ಆಯೋಜಿಸಲಿರುವ ಎರಡೂ ಟೂರ್ನಿಗಳಲ್ಲಿ ಒಸಾಕ ಅವರು ಆಡಲಿದ್ದಾರೆ’ ಎಂದು ಸ್ಟುವರ್ಟ್‌ ಹೇಳಿದ್ದಾರೆ. ಒಸಾಕ ಅವರು ಕಣಕ್ಕಿಳಿಯಲಿರುವ ಹೆಚ್ಚುವರಿ ಟೂರ್ನಿಗಳ ಕುರಿತು ಅವರು ಪ್ರಸ್ತಾಪಿಸಲಿಲ್ಲ. 2018ರ ಅಮೆರಿಕ ಓಪನ್ ಹಾಗೂ 2019ರ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಗಳಲ್ಲಿ ಒಸಾಕ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಆಗಸ್ಟ್‌ 31ರಿಂದ ಸೆಪ್ಟೆಂಬರ್‌ 13ರ ಅವಧಿಯಲ್ಲಿ ಅಮೆರಿಕ ಓಪನ್‌ ಟೂರ್ನಿಯು ನಿಗದಿಯಾಗಿದೆ.

ಕೊರೊನಾ ಹಾವಳಿಯ ಸಂದರ್ಭದಲ್ಲಿ ಪ್ರವಾಸ ಕೈಗೊಳ್ಳುವುದು ಸೂಕ್ತವಲ್ಲ ಎಂಬ ಕಾರಣಕ್ಕೆ, ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಆ್ಯಷ್‌ ಬಾರ್ಟಿ ಅಮೆರಿಕ ಓಪನ್‌ನಿಂದ ಹಿಂದೆ ಸರಿದಿದ್ದಾರೆ.

ಕೊರೊನಾ ಉಪಟಳದಿಂದ ಅಮೆರಿಕದಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಜನ ಸಾವನ್ನಪ್ಪಿದ ವರದಿಯಾಗಿದೆ. ದೇಶದ ಕೆಲವು ಪ್ರದೇಶಗಳಲ್ಲಿ ಸೋಂಕುಗಳ‌ ಸಂಖ್ಯೆ ಇನ್ನೂ ಏರುತ್ತಲೇ ಇದೆ. ಹೀಗಾಗಿ ಟೂರ್ನಿಗೆ ತೆರಳಲು ಹಲವರು ಆಟಗಾರರು ಹಿಂದೇಟು ಹಾಕುತ್ತಿದ್ದಾರೆ.

ಅಮೆರಿಕ ಓಪನ್‌ಗಿಂತಲೂ ಮುನ್ನ ನಡೆಯುವ (ಆಗಸ್ಟ್‌ 20–28) ವೆಸ್ಟರ್ನ್‌ ಮತ್ತು ಸದರ್ನ್‌ ಟೂರ್ನಿಗೆ ಭಾಗವಹಿಸುವವರ ಪಟ್ಟಿಯಲ್ಲಿ ಒಸಾಕ ಅವರ ಹೆಸರಿರಲಿಲ್ಲ. ಆದರೆ ವೈಲ್ಡ್‌ ಕಾರ್ಡ್‌ ಅರ್ಹತೆಯನ್ನು ಅವರು ಪಡೆಯಬಹುದಾಗಿದೆ.

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಮಾರ್ಚ್‌ನಿಂದ ಬಹುತೇಕ ಟೆನಿಸ್‌ ಟೂರ್ನಿಗಳು ಸ್ಥಗಿತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT