ಮ್ಯಾಡ್ರಿಡ್: 2024ರ ಆವೃತ್ತಿಯ ಬಳಿಕ ಟೆನಿಸ್‌ಗೆ ವಿದಾಯ ಹಾಡುವರೇ ಎಂಬುದನ್ನು ಈಗಾಗಲೇ ಹೇಳಲು ಸಾಧ್ಯವಿಲ್ಲ ಸ್ಪೇನ್‌ನ ರಫೆಲ್ ನಡಾಲ್ ಸ್ಪಷ್ಟಪಡಿಸಿದ್ದಾರೆ.

22 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ನಡಾಲ್, ತಮ್ಮ ವೃತ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಗಾಯದ ಸಮಸ್ಯೆಯಿಂದಲೂ ಅವರು ಹೊರತಾಗಿಲ್ಲ. ಇದರಿಂದಾಗಿ 37 ವರ್ಷದ ನಡಾಲ್, ದೀರ್ಘ ಸಮಯದಿಂದ ಟೆನಿಸ್ ಅಂಗಣದಿಂದ ಹೊರಗುಳಿದಿದ್ದಾರೆ.

ಈ ಮಧ್ಯೆ ನಿವೃತ್ತಿ ಕುರಿತು ಪ್ರಶ್ನೆಗೆ, ಈಗಲೇ ನಿರ್ಧರಿಸುವುದು ಉಚಿತವಲ್ಲ ಎಂದು ಹೇಳಿದ್ದಾರೆ.

ನಾನು ಈಗಲೇ ನಿವೃತ್ತಿ ಘೋಷಿಸಲು ಬಯಸುವುದಿಲ್ಲ. ಏಕೆಂದರೆ ಮುಂದೆ ಏನಾಗಬಹುದೆಂದು ಹೇಳಲು ಸಾಧ್ಯವಿಲ್ಲ. ನಾನೇ ನನಗೊಂದು ಅವಕಾಶ ನೀಡಬೇಕಿದೆ ಎಂದು ಹೇಳಿದ್ದಾರೆ.

ಈ ಹಿಂದೆಯೂ ಅನೇಕ ಸಲ ಪುನರಾಗಮನ ಮಾಡಿದ್ದೇನೆ. ದೈಹಿಕವಾಗಿ ಸಮರ್ಥವಾಗಿ ನನ್ನ ಆಟವನ್ನು ಆನಂದಿಸಲು ಪ್ರಾರಂಭಿಸಿದರೆ ನಾನು ಏಕೆ ಈಗಲೇ ನಿವೃತ್ತಿಗೆ ಕಾಲ ನಿಗದಿಪಡಿಸಲಿ? ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ನಡಾಲ್, 11 ತಿಂಗಳ ಹಿಂದೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕೊನೆಯದಾಗಿ ಸ್ಪರ್ಧಿಸಿದ್ದರು. ಅಂದು ಎರಡನೇ ಸುತ್ತಿನಲ್ಲಿ ಸೋಲು ಎದುರಾಗಿತ್ತು. ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಲಿದ್ದಾರೆಯೇ ಎಂಬುದು ಕುತೂಹಲವೆನಿಸಿದೆ.

ಆಸ್ಟ್ರೇಲಿಯನ್ ಓಪನ್ ಎಂಟ್ರಿ ಲಿಸ್ಟ್‌ನಲ್ಲಿ ನಡಾಲ್ ಹೆಸರು ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ. ಏತನ್ಮಧ್ಯೆ ವಿಶ್ವ ಪುರುಷ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ನಡಾಲ್ 664ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.