ಗುರುವಾರ , ಅಕ್ಟೋಬರ್ 29, 2020
20 °C

ಟೆನಿಸ್: ಪುರವ್‌–ರಾಮಕುಮಾರ್ ಜೋಡಿಗೆ ನಿರಾಸೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಲಿಕೇಂಟ್, ಸ್ಪೇನ್‌: ಅಗ್ರ ಶ್ರೇಯಾಂಕದ ಜೋಡಿ ಭಾರತದ ರಾಮಕುಮಾರ್ ರಾಮನಾಥನ್ ಮತ್ತು ಪುರವ್ ರಾಜಾ ಅವರು ಎಟಿಪಿ ಅಲಿಕೇಂಟ್ ಫೆರೆರೊ ಚಾಲೆಂಜರ್ ಟೆನಿಸ್ ಟೂರ್ನಿಯಿಂದ ಹೊರಬಿದ್ದರು.

ಗುರುವಾರ ನಡೆದ ಪಂದ್ಯದಲ್ಲಿ ಅವರು ಜೆರಾರ್ಡ್‌ ಗ್ರಾನೊಲರ್ಸ್ ಮತ್ತು ಪೆಡ್ರೊ ಮಾರ್ಟಿನೆಜ್ ಜೋಡಿಗೆ 2–6, 2–6ರಲ್ಲಿ ಮಣಿದರು. ಆವೆಮಣ್ಣಿನ ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಸಿಂಗಲ್ಸ್ ವಿಭಾಗದಿಂದ ರಾಮಕುಮಾರ್ ಈಗಾಗಲೇ ಹೊರಬಿದ್ದಿದ್ದರು. ಅವರನ್ನು ಕಾರ್ಲೋಸ್ ಅಲ್ಕರಜ್ ಸೋಲಿಸಿದ್ದರು.

ಭಾರತದ ಎನ್‌.ಶ್ರೀರಾಮ್ ಬಾಲಾಜಿ ಮತ್ತು ಸ್ವಿಟ್ಜರ್ಲೆಂಡ್‌ನ ಲೂಕಾ ಮಾರ್ಗರೊಲಿ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಎನ್ಜೊ ಕಾಕಾಡ್ ಮತ್ತು ಅಲ್ಬನೊ ಎದುರು ಗೆಲುವು ಸಾಧಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು