ಶನಿವಾರ, ಮಾರ್ಚ್ 6, 2021
26 °C
ಎಐಟಿಎ ಪುರುಷರ ಟೆನಿಸ್ ಚಾಂಂಪಿಯನ್‌ಷಿಪ್‌

ರಿಷಿ ರೆಡ್ಡಿ ಮುಡಿಗೆ ಪ್ರಶಸ್ತಿ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಗ್ರಶ್ರೇಯಾಂಕದ ಆಟಗಾರ ಕರ್ನಾಟಕದ ರಿಷಿ ರೆಡ್ಡಿ ಅವರು ಎಐಟಿಎ ಪುರುಷರ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇಲ್ಲಿಯ ಪಡುಕೋಣೆ–ದ್ರಾವಿಡ್ ಸ್ಪೋರ್ಟ್ಸ್ ಎಕ್ಸ್‌ಲೆನ್ಸ್‌ನ ಪಿಬಿಐ –ಸಿಎಸ್‌ಇ ಟೆನಿಸ್ ಆಕಾಡೆಮಿಯಲ್ಲಿ ನಡೆದ ಟೂರ್ನಿಯ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ರಿಷಿ 6–3, 6–2ರಿಂದ ಗುಜರಾತ್‌ನ ಮಧ್ವಿನ್ ಕಾಮತ್ ಅವರನ್ನು ಸೋಲಿಸಿದರು.

ಜಿದ್ದಾಜಿದ್ದಿನ ಹಣಾಹಣಿ ನಿರೀಕ್ಷಿಸಲಾಗಿದ್ದ ಪಂದ್ಯವನ್ನು ರಿಷಿ ಏಕಪಕ್ಷೀಯವಾಗಿ ಗೆದ್ದು ಬೀಗಿದರು. ಮೊದಲ ಸೆಟ್‌ ಆರಂಭದಲ್ಲಿ ಸಮಬಲದಲ್ಲಿ ಸಾಗಿತ್ತು. ಐದನೇ ಗೇಮ್‌ನಲ್ಲಿ ಬ್ರೇಕ್ ಪಾಯಿಂಟ್‌ ಗಳಿಸಿದ ರಿಷಿ ಸೆಟ್‌ಅನ್ನು ಸುಲಭವಾಗಿ ಗೆದ್ದುಕೊಂಡರು. ಅದೇ ಲಯವನ್ನು ಮುಂದುವರಿಸಿದ ಅವರು ಎರಡನೇ ಸೆಟ್‌ನ ಮೂರನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಮುರಿದರು. ಏಳನೇ ಗೇಮ್‌ನಲ್ಲೂ ಇದು ಪುನರಾವರ್ತನೆಯಾಯಿತು. ಇದರೊಂದಿಗೆ 5–2ರೊಂದಿಗೆ ಮುನ್ನಡೆದ ಜೈನ್‌ ಕಾಲೇಜು ವಿದ್ಯಾರ್ಥಿ ರಿಷಿ, ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಪಂದ್ಯ ಜಯಿಸಿ ಸಂಭ್ರಮದಲ್ಲಿ ಅಲೆಯಲ್ಲಿ ತೇಲಿದರು.

‘ನನಗನಿಸಿದಂತೆ ಈ ವಾರದಲ್ಲಿ ನಾನು ಉತ್ತಮ ಸಾಮರ್ಥ್ಯ ತೋರಿದೆ. ಕಳೆದ ವಾರ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಂಡಿದ್ದು ಟ್ರೋಫಿಯನ್ನು ಗೆಲ್ಲಲು ಸಹಕಾರಿಯಾಯಿತು‘ ಎಂದು ಪಂದ್ಯದ ಬಳಿಕ ರಿಷಿ ಪ್ರತಿಕ್ರಿಯಿಸಿದರು.

ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಸೋಮವಾರದಿಂದ ತತ್ವಂ ಟ್ಯಾಲೆಂಟ್‌ ಸಿರೀಸ್ ಟೂರ್ನಿ ಆರಂಭವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.