ಮಂಗಳವಾರ, ಜನವರಿ 18, 2022
15 °C

ಎಟಿಪಿ ಟೆನಿಸ್ ಟೂರ್ನಿ: ಪ್ರಶಸ್ತಿ ಸುತ್ತಿಗೆ ಬೋಪಣ್ಣ– ರಾಮ್‌ಕುಮಾರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಡಿಲೇಡ್‌: ಉತ್ತಮ ಸಾಮರ್ಥ್ಯ ಮುಂದುವರಿಸಿದ ಭಾರತದ ರೋಹನ್ ಬೋಪಣ್ಣ ಮತ್ತು ರಾಮ್‌ಕುಮಾರ್ ರಾಮನಾಥನ್ ಅವರು ಅಡಿಲೇಡ್‌ ಇಂಟರ್‌ನ್ಯಾಷನಲ್‌ ಎಟಿಪಿ 250 ಟೆನಿಸ್ ಟೂರ್ನಿಯ ಫೈನಲ್‌ ತಲುಪಿದ್ದಾರೆ.

ಶನಿವಾರ ನಡೆದ ಡಬಲ್ಸ್ ವಿಭಾಗದ ನಾಲ್ಕರಘಟ್ಟದ ಹಣಾಹಣಿಯಲ್ಲಿ, ಶ್ರೇಯಾಂಕರಹಿತ ಭಾರತದ ಜೋಡಿ  6-2, 6-4ರಿಂದ ಬೋಸ್ನಿಯಾದ ತೊಮಿಸ್ಲಾವ್‌ ಬ್ರಕಿಕ್‌ ಮತ್ತು ಮ್ಯಾಕ್ಸಿಕೊದ ಸ್ಯಾಂಟಿಯಾಗೊ ಗೊಂಜಾಲೆಜ್ ಅವರನ್ನು ಸೋಲಿಸಿದರು.

ತೊಮಿಸ್ಲಾವ್‌ ಮತ್ತು ಸ್ಯಾಂಟಿಯಾಗೊ ಇಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿದ್ದರು.

ಪ್ರಶಸ್ತಿ ಸುತ್ತಿನಲ್ಲಿ ಬೋಪಣ್ಣ– ರಾಮ್‌ಕುಮಾರ್ ಅವರಿಗೆ ಅಗ್ರಶ್ರೇಯಾಂಕದ ಜೋಡಿ ಕ್ರೊವೇಷ್ಯಾದ ಇವಾನ್ ದೊಡಿಗ್‌ ಮತ್ತು ಬ್ರೆಜಿಲ್‌ನ ಮಾರ್ಸೆಲೊ ಮೆಲೊ ಸವಾಲು ಎದುರಾಗಲಿದೆ. 

41 ವರ್ಷದ ಬೋಪಣ್ಣ ಮತ್ತು ದೊಡಿಗ್‌ ಹಲವು ಬಾರಿ ಜೊತೆಯಾಗಿ ಆಡಿರುವುದರಿಂದ ಫೈನಲ್‌ ಪಂದ್ಯ ಕುತೂಹಲ ಕೆರಳಿಸಿದೆ. ಸೆಪ್ಟೆಂಬರ್‌ನಲ್ಲಿ ನಡೆದ ಅಮೆರಿಕ ಓಪನ್‌ನಲ್ಲಿ ಇವರಿಬ್ಬರು ಮೂರನೇ ಸುತ್ತಿನಲ್ಲಿ ಸೋಲನುಭವಿಸಿದ್ದರು.

ಎಟಿಪಿ ಟೂರ್‌ನಲ್ಲಿ ಬೋಪಣ್ಣ–ರಾಮಕುಮಾರ್ ಮೊದಲ ಬಾರಿ ಜೊತೆಯಾಗಿ ಕಣಕ್ಕಿಳಿದಿದ್ದು, ಉತ್ತಮ ಫಲಿತಾಂಶವನ್ನೇ ಪಡೆದಿದ್ದಾರೆ.

ಇದೇ 17ರಿಂದ ಮೆಲ್ಬರ್ನ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ಗೆ ಇದು ಅಭ್ಯಾಸ ಟೂರ್ನಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು