ಶನಿವಾರ, ಜೂನ್ 25, 2022
24 °C

ಫ್ರೆಂಚ್‌ ಓಪನ್‌ನಿಂದ ಹೊರಬಿದ್ದ ರೋಹನ್ ಬೋಪಣ್ಣ, ಭಾರತದ ಹೋರಾಟ ಅಂತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್: ಭಾರತದ ರೋಹನ್ ಬೋಪಣ್ಣ ಮತ್ತು ಕ್ರೊವೇಶಿಯಾದ ಫ್ರಾಂಕೊ ಸ್ಕುಗೊರ್ ಜೋಡಿ ಸೋಮವಾರ ಇಲ್ಲಿ ನಡೆದ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸೋತಿದ್ದರಿಂದ ಫ್ರೆಂಚ್ ಓಪನ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು.

ಒಂದು ಗಂಟೆ 17 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 41 ವರ್ಷದ ಬೋಪಣ್ಣ ಮತ್ತು ಸ್ಕುಗೊರ್ ಜೋಡಿ 5-7 3-6 ಸೆಟ್‌ಗಳ ಅಂತರದಿಂದ ಸ್ಪ್ಯಾನಿಷ್ ಜೋಡಿ ಪ್ಯಾಬ್ಲೊ ಆಂಡೂಜರ್ ಮತ್ತು ಪೆಡ್ರೊ ಮಾರ್ಟಿನೆಜ್ ಎದುರು ಸೋತಿತು.

ಕಳೆದ ವಾರ, ದಿವಿಜ್ ಶರಣ್ ಮತ್ತು ಅಂಕಿತಾ ರೈನಾ ಕ್ರಮವಾಗಿ ಪುರುಷರ ಮತ್ತು ಮಹಿಳಾ ಡಬಲ್ಸ್ ಪಂದ್ಯಗಳ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಸೋತಿದ್ದರು.

ಸಿಂಗಲ್ಸ್ ವಿಭಾಗದಲ್ಲಿ ಸುಮಿತ್ ನಾಗಲ್, ರಾಮ್‌ಕುಮಾರ್ ರಾಮನಾಥನ್, ಪ್ರಜ್ನೇಶ್ ಗುಣೇಶ್ವರನ್ ಮತ್ತು ಅಂಕಿತಾ ವಿಫಲರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು