ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಟುಕಿ ಟೂರ್ನಿಯಲ್ಲಿ ಸೆರೆನಾ ಕಣಕ್ಕೆ

Last Updated 17 ಜುಲೈ 2020, 7:18 IST
ಅಕ್ಷರ ಗಾತ್ರ

ಲಾಸ್‌ ಏಂಜಲೀಸ್‌: ಅಮೆರಿಕದ ಟೆನಿಸ್‌ ತಾರೆ ಸೆರೆನಾ ವಿಲಿಯಮ್ಸ್‌ ಅವರು ಆಗಸ್ಟ್‌ನಲ್ಲಿ ನಡೆಯುವ ಕೆಂಟುಕಿ ಓಪನ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

‘ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ನಲ್ಲಿ 23 ಪ್ರಶಸ್ತಿಗಳನ್ನು ಗೆದ್ದಿರುವ ಸೆರೆನಾ ಹಾಗೂ 2017ರ ಅಮೆರಿಕ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಸ್ಲೋನ್‌ ಸ್ಟೀಫನ್ಸ್‌ ಅವರು ಟೂರ್ನಿಯಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಾರೆ’ ಎಂದು ಸಂಘಟಕರು ಗುರುವಾರ ತಿಳಿಸಿದ್ದಾರೆ.

ಈ ಟೂರ್ನಿಯು ಆಗಸ್ಟ್‌ 10ರಿಂದ ಆರಂಭವಾಗಲಿದೆ.

38 ವರ್ಷ ವಯಸ್ಸಿನ ಸೆರೆನಾ ಅವರು ಈ ವರ್ಷದ ಫೆಬ್ರುವರಿಯಲ್ಲಿ ನಡೆದಿದ್ದ ಫೆಡ್‌ ಕಪ್‌ನಲ್ಲಿ ಅಮೆರಿಕ ತಂಡದ ಪರ ಕಣಕ್ಕಿಳಿದಿದ್ದರು. ನಂತರ ಅವರು ಟೆನಿಸ್‌ ಅಂಗಳದಿಂದ ದೂರ ಉಳಿದಿದ್ದರು.

ಆಗಸ್ಟ್‌ನಲ್ಲಿ ಡಬ್ಲ್ಯುಟಿಎ ಹಾಗೂ ಎಟಿಪಿ ಟೂರ್‌ ಟೂರ್ನಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ನ್ಯೂಯಾರ್ಕ್‌ನಲ್ಲಿ ಆಗಸ್ಟ್‌ 31ರಿಂದ ಆರಂಭವಾಗಲಿರುವ ಅಮೆರಿಕ ಓಪನ್‌ ಟೂರ್ನಿಯಲ್ಲಿ ಆಡುವುದಾಗಿ ಸೆರೆನಾ ಕೆಲ ದಿನಗಳ ಹಿಂದೆ ಹೇಳಿದ್ದರು.

ಕೆಂಟುಕಿ ಟೂರ್ನಿಯನ್ನು ಹೊಸದಾಗಿ ಡಬ್ಲ್ಯುಟಿಎ ವೇಳಾಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಡಬ್ಲ್ಯುಟಿಎ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸ್ಟೀವ್‌ ಸಿಮನ್‌ ಹೋದ ವಾರ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT