ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಸೆರೆನಾ ಚಾಂಪಿಯನ್‌

Last Updated 12 ಜನವರಿ 2020, 19:55 IST
ಅಕ್ಷರ ಗಾತ್ರ

ಆಕ್ಲೆಂಡ್‌ : 38 ವರ್ಷ ವಯಸ್ಸಿನ ಸೆರೆನಾ ವಿಲಿಯಮ್ಸ್‌ ಅವರು ಆಕ್ಲೆಂಡ್‌ ಕ್ಲಾಸಿಕ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದಾರೆ.

ಭಾನುವಾರ ನಡೆದ ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅಮೆರಿಕದ ಆಟಗಾರ್ತಿ ಸೆರೆನಾ 6–3, 6–4 ನೇರ ಸೆಟ್‌ಗಳಿಂದ ಅಮೆರಿದವರೇ ಆದ ಜೆಸ್ಸಿಕಾ ಪೆಗುಲಾ ಅವರನ್ನು ಮಣಿಸಿದರು.

ಇದರೊಂದಿಗೆ ಮೂರು ವರ್ಷಗಳಿಂದ ಕಾಡುತ್ತಿದ್ದ ಪ್ರಶಸ್ತಿಯ ಕೊರಗನ್ನು ದೂರ ಮಾಡಿಕೊಂಡರು. 2017ರ ಮೆಲ್ಬರ್ನ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಅವರು ಬಳಿಕ ಒಮ್ಮೆಯೂ ಡಬ್ಲ್ಯುಟಿಎ ಕಿರೀಟ ಮುಡಿಗೇರಿಸಿಕೊಂಡಿರಲಿಲ್ಲ.

ತಾಯಿಯಾದ ನಂತರ ಸೆರೆನಾ ಜಯಿಸಿದ ಚೊಚ್ಚಲ ಪ್ರಶಸ್ತಿ ಇದಾಗಿದೆ. ಟೂರ್ನಿಯಲ್ಲಿ ಗೆದ್ದ ₹ 31 ಲಕ್ಷ ಬಹುಮಾನ ಮೊತ್ತವನ್ನು ಅವರು ಆಸ್ಟ್ರೇಲಿಯಾ ಕಾಳ್ಗಿಚ್ಚು ಪರಿಹಾರ ನಿಧಿಗೆ ನೀಡಿದ್ದಾರೆ.

‘ಎರಡು ದಶಕಗಳ ಕಾಲ ಆಸ್ಟ್ರೇಲಿಯಾದಲ್ಲಿ ವಿವಿಧ ಟೂರ್ನಿಗಳನ್ನು ಆಡಿದ್ದೇನೆ. ಭೀಕರ ಕಾಳ್ಗಿಚ್ಚಿನಿಂದಾಗಿ ಅಲ್ಲಿನ ಜನ ಸಂಕಷ್ಟಕ್ಕೆ ಸಿಲುಕಿರುವ ಸುದ್ದಿಗಳನ್ನು ಓದಿ ಬಹಳ ಬೇಸರವಾಗಿತ್ತು. ಆಕ್ಲೆಂಡ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರೆ ಸಿಗುವ ಮೊತ್ತವನ್ನು ಕಾಳ್ಗಿಚ್ಚು ಪರಿಹಾರ ನಿಧಿಗೆ ನೀಡಬೇಕೆಂದು ಮೊದಲೇ ನಿರ್ಧರಿಸಿದ್ದೆ’ ಎಂದು ಸೆರೆನಾ ತಿಳಿಸಿದ್ದಾರೆ.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ಸೆರೆನಾ, ಮೊದಲ ಸೆಟ್‌ನಲ್ಲಿ 1–3ರಿಂದ ಹಿನ್ನಡೆ ಕಂಡಿದ್ದರು. ಇದರಿಂದ ವಿಚಲಿತರಾಗದೇ ನಂತರ ಪರಿಣಾಮಕಾರಿಯಾಗಿ ಆಡಿ ಸೆಟ್‌ ಜಯಿಸಿದರು. ಎರಡನೇ ಸೆಟ್‌ನಲ್ಲೂ ಅವರು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT