ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯನ್ ಓಪನ್: ಪ್ರಧಾನ ಸುತ್ತಿಗೆ ಸುಮಿತ್ ನಗಾಲ್

Published 12 ಜನವರಿ 2024, 20:20 IST
Last Updated 12 ಜನವರಿ 2024, 20:20 IST
ಅಕ್ಷರ ಗಾತ್ರ

ಮೆಲ್ಬರ್ನ್: ಭಾರತದ ಸುಮಿತ್ ನಗಾಲ್ ಅವರು ಶುಕ್ರವಾರ ನಡೆದ ಅರ್ಹತಾ ಟೂರ್ನಿಯ ಅಂತಿಮ ಸುತ್ತಿನ ಪಂದ್ಯದಲ್ಲಿ ಸ್ಲೊವಾಕಾದ ಅಲೆಕ್ಸ್ ಮೊಲ್ಕನ್ ಅವರನ್ನು ಸೋಲಿಸಿ ಪ್ರಧಾನ ಸುತ್ತು ತಲುಪಿದರು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದುಕೊಂಡರು.  

2 ಗಂಟೆ 3 ನಿಮಿಷಗಳ ಸೆಣಸಾಟದಲ್ಲಿ ನಗಾಲ್ 6-4, 6-4 ಸೆಟ್‌ಗಳಿಂದ ಮೊಲ್ಕನ್ ವಿರುದ್ಧ ಜಯ ಸಾಧಿಸಿದರು.

ಭಾರತದ 26 ವರ್ಷದ ಆಟಗಾರ ಮೊದಲ ಸುತ್ತಿನಲ್ಲಿ ಕಜಕಿಸ್ತಾನದ ವಿಶ್ವದ 31ನೇ ಕ್ರಮಾಂಕದ ಅಲೆಕ್ಸಾಂಡರ್ ಬುಬ್ಲಿಕ್ ಅವರನ್ನು ಎದುರಿಸಲಿದ್ದಾರೆ.

ನಗಾಲ್ ಪ್ರಸ್ತುತ ವಿಶ್ವ ಕ್ರಮಾಂಕದ ಸಿಂಗಲ್ಸ್‌ನಲ್ಲಿ 139ನೇ ಸ್ಥಾನ ಪಡೆದಿದ್ದಾರೆ. ಅರ್ಹತಾ ಪಂದ್ಯ ಗೆಲ್ಲುವ ಮೂಲಕ 2021ರ ಬಳಿಕ ಅವರು ಮೊದಲ ಬಾರಿ ಹಾಗೂ ಒಟ್ಟಾರೆ ನಾಲ್ಕನೇ ಬಾರಿ ಗ್ರ್ಯಾನ್‌ ಸ್ಲಾಮ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದುಕೊಂಡರು. 

ನಗಾಲ್ ಆ ವರ್ಷದ ಆರಂಭಿಕ ಸುತ್ತಿನಲ್ಲಿ ಲಿಥುವೇನಿಯಾದ ರಿಕಾರ್ಡಾಸ್ ಬೆರಾಂಕಿಸ್ ವಿರುದ್ಧ 2-6, 5-7, 3-6 ಸೆಟ್ ಗಳಿಂದ  ಪರಾಭವಗೊಂಡಿದ್ದರು.

ನಗಾಲ್ ಈ ಹಿಂದೆ 2019, 2020ರಲ್ಲಿ ಅಮೆರಿಕ ಓಪನ್‌ ಪ್ರಧಾನ ಸುತ್ತಿನಲ್ಲಿ ಆಡಿದ್ದರು. 2021ರಲ್ಲಿ ಆಸ್ಟ್ರೇಲಿಯಾ ಓಪನ್ ಪ್ರಧಾನ ಸುತ್ತಿನಲ್ಲಿ ಆಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT