ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟೇಬಲ್ ಟೆನಿಸ್ ಟೂರ್ನಿ | ಅಭಿನವ್‌ಗೆ ಪ್ರಶಸ್ತಿ

Published 29 ಆಗಸ್ಟ್ 2024, 20:56 IST
Last Updated 29 ಆಗಸ್ಟ್ 2024, 20:56 IST
ಅಕ್ಷರ ಗಾತ್ರ

ಬೆಳಗಾವಿ: ಅಭಿನವ್ ಕೆ. ಮೂರ್ತಿ ಮತ್ತು ದೇಶ್ನಾ ಎಂ ವಂಶಿಕಾ ಅವರು ಬೆಳಗಾವಿ ಕ್ಲಬ್‌ನಲ್ಲಿ ನಡೆಯುತ್ತಿರುವ  ಐದನೇ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 19 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದರು. 

ಬೆಳಗಾವಿ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆ (ಬಿಡಿಟಿಟಿಎ) ಆಶ್ರಯದಲ್ಲಿ  ಆಯೋಜನೆಯಾಗಿರುವ ಟೂರ್ನಿಯ ಬಾಲಕರ ವಿಭಾಗದ ಫೈನಲ್‌ನಲ್ಲಿ ಅಭಿನವ್ 7-11, 11-9, 11-9, 11-5, 11 - 8ರಿಂದ ವಿ.ಜಿ. ವಿಭಾಸ್ ವಿರುದ್ಧ ಜಯಿಸಿದರು.  ಬಾಲಕಿಯರ ಫೈನಲ್‌ನಲ್ಲಿ ದೇಶ್ನಾ 11-9, 11-9, 11-2, 11-3ರಿಂದ ಹಿಮಾಂಶಿ ಚೌಧರಿ ವಿರುದ್ಧ ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT