ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಟನ್ ಟೆನಿಸ್‌: ಇತಿಹಾಸ ಬರೆದ ಜಬೆವುರ್‌

ಟೂರ್ನಿಯ ಕ್ವಾರ್ಟರ್‌ಫೈನಲ್ ತಲುಪಿದ ಮೊದಲ ಅರಬ್ ಆಟಗಾರ್ತಿ
Last Updated 5 ಜುಲೈ 2021, 13:58 IST
ಅಕ್ಷರ ಗಾತ್ರ

ಲಂಡನ್‌: ಟ್ಯೂನಿಷಿಯಾದ ಆನ್ಸ್ ಜಬೆವುರ್‌ ಅವರು ವಿಂಬಲ್ಡನ್ ಟೆನಿಸ್‌ ಟೂರ್ನಿಯಲ್ಲಿ ಸೋಮವಾರ ಇತಿಹಾಸ ಬರೆದರು. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಏಳನೇ ಶ್ರೇಯಾಂಕದ ಇಗಾ ಸ್ವೆಟೆಕ್ ಅವರನ್ನು ಮಣಿಸುವ ಮೂಲಕ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ ಮೊದಲ ಅರಬ್‌ ಮಹಿಳೆ ಎನಿಸಿಕೊಂಡರು.

ಇಲ್ಲಿ ನಡೆದ ಪ್ರೀಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಜಬೆವುರ್‌ ಅವರಿಗೆ 5–7, 6–1, 6–1ರಿಂದ ಜಯ ಒಲಿಯಿತು.

ಸತತ ನಾಲ್ಕು ಗೇಮ್‌ಗಳನ್ನು ಕಳೆದುಕೊಂಡ ಜಬೆವುರ್‌, ಮೊದಲ ಸೆಟ್‌ಅನ್ನು ಕೈಚೆಲ್ಲಿದರು. ಆದರೆ ಅವರು ನೀಡಿದ ತಿರುಗೇಟಿಗೆ, ಕಳೆದ ವರ್ಷದ ಫ್ರೆಂಚ್‌ ಓಪನ್ ಚಾಂಪಿಯನ್‌, ಪೋಲೆಂಡ್‌ನ ಸ್ವೆಟೆಕ್ ಸೋಲೊಪ್ಪಿಕೊಳ್ಳಬೇಕಾಯಿತು.

ಟೂರ್ನಿಯಈ ಆವೃತ್ತಿಯಲ್ಲಿ ಟ್ಯೂನಿಷಿಯಾ ಆಟಗಾರ್ತಿಯು, ಗ್ರ್ಯಾನ್‌ಸ್ಲಾಮ್ ವಿಜೇತ ಮೂವರು ಆಟಗಾರ್ತಿಯರನ್ನು ಮಣಿಸಿದ್ದಾರೆ. ಅಮೆರಿಕದ ವೀನಸ್ ವಿಲಿಯಮ್ಸ್ ಹಾಗೂ ಸ್ಪೇನ್‌ನ ಗಾರ್ಬೈನ್ ಮುಗುರುಜಾ, ಜಬೆವುರ್‌ಗೆ ಸೋತವರು.

ಮಂಗಳವಾರ ನಡೆಯಲಿರುವ ಎಂಟರಘಟ್ಟದ ಪಂದ್ಯದಲ್ಲಿ ಜಬೆವುರ್‌, ಎರಡನೇ ಶ್ರೇಯಾಂಕದ ಆಟಗಾರ್ತಿ ಬೆಲಾರಸ್‌ನ ಅರಿನಾ ಸಬಲೆಂಕಾ ಅವರನ್ನು ಎದುರಿಸುವರು. ಮತ್ತೊಂದು ಪಂದ್ಯದಲ್ಲಿ ಸಬಲೆಂಕಾ 6-3, 4-6, 6-3ರಿಂದ ಕಜಕಸ್ತಾನದ ಎಲೆನಾ ರಿಬಾಕಿನಾ ಅವರನ್ನು ಸೋಲಿಸಿದರು.

ನಾಲ್ಕನೇ ಸುತ್ತಿನ ಇನ್ನೊಂದು ಹಣಾಹಣಿಯಲ್ಲಿ, ಕರೋಲಿನಾ ಪ್ಲಿಸ್ಕೊವಾ 6–2, 6–3ರಿಂದ ರಷ್ಯಾದ ಲ್ಯೂಡ್‌ಮಿಲಾ ಸ್ಯಾಮ್ಸೊನೊವಾ ಅವರನ್ನು ಮಣಿಸಿದರು. ಜೆಕ್ ಗಣರಾಜ್ಯದ ಆಟಗಾರ್ತಿ ವಿಂಬಲ್ಡನ್ ಟೂರ್ನಿಯಲ್ಲಿ ಮೊದಲ ಬಾರಿ ಎಂಟರಘಟ್ಟ ತಲುಪಿದ ಸಾಧನೆ ಮಾಡಿದರು.

ಬೆರೆಟ್ಟಿನಿ ಜಯಭೇರಿ: ಮಟ್ಟಿಯೊ ಬೆರೆಟ್ಟಿನಿ 23 ವರ್ಷಗಳಲ್ಲಿ ವಿಂಬಲ್ಡನ್ ಟೂರ್ನಿಯ ಕ್ವಾರ್ಟರ್‌ಫೈನಲ್ ತಲುಪಿದಇಟಲಿಯ ಮೊದಲ ಆಟಗಾರ ಎಂಬ ಶ್ರೇಯ ಗಳಿಸಿದರು. ಪುರುಷರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನಲ್ಲಿ ಸೋಮವಾರ ಅವರು 6-4 6-3 6-1ರಿಂದ ಬೆಲಾರಸ್‌ನ ಇಲ್ಯಾ ಇವಾಷ್ಕಾ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT