ಮಂಗಳವಾರ, ಮಾರ್ಚ್ 9, 2021
29 °C

ಟೆನಿಸ್‌: ಪ್ರಶಸ್ತಿಗಾಗಿ ಅಗ್ರ ಶ್ರೇಯಾಂಕಿತರ ಹಣಾಹಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಗ್ರ ಶ್ರೇಯಾಂಕಿತರು ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಟ್ಯಾಲೆಂಟ್ ಸೀರೀಸ್‌ ಅಂಗವಾಗಿ ನಡೆಯುತ್ತಿರುವ ತತ್ವಂ ಜೂನಿಯರ್ ಟೂರ್‌ನ 12 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿಗಾಗಿ ಸೆಣಸುವರು.

ಕೆಎಸ್‌ಎಲ್‌ಟಿಎ ಅಂಗಣದಲ್ಲಿ ಗುರುವಾರ ನಡೆದ ಬಾಲಕರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ತಮಿಳುನಾಡು ಆಟಗಾರ ಮೀರ್ ಫಜಲ್ ಅಲಿ 7-5, 6-4ರಲ್ಲಿ ದಿಗಂತ್ ಎಂ ಅವರನ್ನು ಸೋಲಿಸಿದರು. ಎರಡನೇ ಶ್ರೇಯಾಂಕದ ಲಿಖಿತ್ ಗೌಡ ಎಂಟನೇ ಶ್ರೇಯಾಂಕದ ರಣವೀರ್ ಪನ್ನು ವಿರುದ್ಧ 6-1, 6-0ರಲ್ಲಿ ಗೆದ್ದರು. 

ಬಾಲಕಿಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಮೇಘನಾ ಜಿ.ಡಿ 6-1, 6-2ರಲ್ಲಿ ಅಣ್ವೇಷಾ ಧರ್ ವಿರುದ್ಧ ಗೆಲುವು ಸಾಧಿಸಿದರೆ ಕಾಶ್ವಿ ಸುನಿಲ್ 6-2, 6-4ರಲ್ಲಿ ಕಾರ್ತೀಕ ಪದ್ಮಕುಮಾರ್ ಅವರನ್ನು ಮಣಿಸಿದರು.

ಬಾಲಕರ ಡಬಲ್ಸ್‌ನ ಸೆಮಿಫೈನಲ್ಸ್‌ನಲ್ಲಿ ಮೀರ್ ಫಜಲ್ ಅಲಿ ಮತ್ತು ಶೌರ್ಯ ಕಲ್ಲಂಬಲ್ಲ ಜೋಡಿ ಅನೀಶ್ ಪಾಟೀಲ್ ಮತ್ತು ಯಶಸ್‌ ರಾಜ್ ಅವರನ್ನು  6-0, 6-1ರಲ್ಲಿ ಮಣಿಸಿದರೆ ತನಿಷ್ ವೇಪನಪಳ್ಳಿ ಹಾಗೂ ಸ್ಟೀಫನ್ ಡೈಲನ್ ಜೋಡಿ ದಿಗಂತ್ ಮತ್ತು ಲಿಖಿತ್ ಗೌಡ ಎದುರು 7-5, 6-7 (3), 10-8ರಲ್ಲಿ ಗೆಲುವು ಸಾಧಿಸಿದರು. ಬಾಲಕಿಯರ ವಿಭಾಗದ ಡಬಲ್ಸ್‌ನಲ್ಲಿ ಸೃಷ್ಟಿ ಕಿರಣ್‌ ಮತ್ತು ತನು ವಿಶ್ವಾಸ್ ಜೋಡಿ ಮೇಘನಾ ಜಿ.ಡಿ ಮತ್ತು ಜೀವಿಕಾ ಚನ್ನಬೈರೇಗೌಡ ಅವರನ್ನು 4-6, 7-6 (5), 10–8ರಲ್ಲಿ, ಅಗಮ್ಯ ಚಂದ್ರ ಮತ್ತು ಐಲಿನ್ ಮಿರಿಯಮ್ ಕಾರ್ನೆಲಿಯೊ 7-6 (4), 6-4ರಲ್ಲಿ ದಕ್ಷಣ ಎಸ್‌.ಆರ್ ಮತ್ತು ಸನಾ ಸೇಷ್‌ ವರ್ಧಮಾನ್ ಅವರನ್ನು 7-6 (4), 6-4ರಲ್ಲಿ ಮಣಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.