ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್: ಎರಡು ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಐಟಿಐಎ ತನಿಖೆ

Last Updated 14 ಜುಲೈ 2021, 10:56 IST
ಅಕ್ಷರ ಗಾತ್ರ

ಲಂಡನ್: ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯ ಎರಡು ಪಂದ್ಯಗಳಲ್ಲಿ ಸಂಭವನೀಯ ಮ್ಯಾಚ್ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಟೆನಿಸ್ ಸಮಗ್ರತೆ ಏಜೆನ್ಸಿ (ಐಟಿಐಎ) ತನಿಖೆ ಕೈಗೊಂಡಿದೆ.

ತನಿಖೆ ಸಂಬಂಧ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ. ಎರಡು ಪಂದ್ಯಗಳಲ್ಲಿ ಬೆಟ್ಟಿಂಗ್ ಅವ್ಯವಹಾರ ನಡೆದಿರುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ಲಭಿಸಿದೆ ಎಂದು ಐಟಿಐಎ ವಕ್ತಾರ ತಿಳಿಸಿದ್ದಾರೆ.

ಈ ಕುರಿತು ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ವರದಿಯು ಮ್ಯಾಚ್ ಫಿಕ್ಸಿಂಗ್‌ಗೆ ಪುರಾವೆಯಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಇದು ಸಂಭವನೀಯ ಬೆಟ್ಟಿಂಗ್ ದಂಧೆಯನ್ನು ಸೂಚಿಸುತ್ತದೆ. ಈ ಕುರಿತು ಐಟಿಐಎಯು ಸಮಗ್ರ ಹಾಗೂ ಗೌಪ್ಯ ತನಿಖೆಯನ್ನು ನಡೆಸಲಿದೆ ಎಂದಿದ್ದಾರೆ.

ವೃತ್ತಿಪರ ಟೆನಿಸ್‌ ಆಟಗಾರರ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಟಿಪಿ, ಡಬ್ಲ್ಯುಟಿಎ, ಐಟಿಎಫ್ ಮತ್ತು ಗ್ರ್ಯಾನ್‌ಸ್ಲಾಮ್ ಮಂಡಳಿ, ಜನವರಿಯಲ್ಲಿ ಸ್ವತಂತ್ರ ಮಂಡಳಿಯಾದ ಐಟಿಐಎ ಅನ್ನು ರೂಪಿಸಿತ್ತು. ಇದು ಈಹಿಂದೆ ಟಿಐಯು ಹೆಸರಿನಿಂದ ಗುರುತಿಸಲ್ಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT