ಬುಧವಾರ, ಸೆಪ್ಟೆಂಬರ್ 30, 2020
21 °C

ಅಮೆರಿಕ ಓಪನ್: ಪ್ಲಿಸ್ಕೋವಾಗೆ ಜಯ

ಎಪಿ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್: ಜೆಕ್ ಗಣರಾಜ್ಯದ ಕೆರೋಲಿನಾ ಪ್ಲಿಸ್ಕೋವಾ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರು.

ಮಂಗಳವಾರ ಬೆಳಗಿನ ಜಾವ (ಭಾರತೀಯ ಕಾಲಮಾನ) ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಪ್ಲಿಸ್ಕೋವಾ 6–4, 6–0ಯಿಂದ ಉಕ್ರೇನಿನ ಅನ್ಹೇಲಿನಾ ಕಲಿನಿನಾ ವಿರುದ್ಧ ಜಯಗಳಿಸಿದರು.

ಸೋಮವಾರ ರಾತ್ರಿ ನಡೆದ ಇನ್ನೊಂದು ಪಂದ್ಯದಲ್ಲಿ ಜಪಾನಿನ ನವೊಮಿ ಒಸಾಕಾ 6–2, 5–7, 6–2 ರಿಂದ ಮಿಸಾಕಿ ಡೋಯ್ ವಿರುದ್ಧ ಗೆದ್ದು ಮುನ್ನಡೆದರು.

ಒಸಾಕಾ 2018ರಲ್ಲಿ ಅಮೆರಿಕ ಓಪನ್ ಪ್ರಶಸ್ತಿ ಗೆದ್ದಿದ್ದರು. ಹೋದ ವಾರ ವೆಸ್ಟರ್ನ್–ಸದರ್ನ್  ಓಪನ್ ಟೆನಿಸ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದರು. ಆದರೆ, ಸ್ನಾಯುಸೆಳೆತದಿಂದಾಗಿ ಹಿಂದೆ ಸರಿದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು