ಲಂಡನ್: ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮತ್ತಷ್ಟು ಶ್ರೇಯಾಂಕಿತ ಆಟಗಾರರು ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದರು. ಮಹಿಳೆಯರ ಸಿಂಗಲ್ಸ್ನಲ್ಲಿ ಮೂರನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಮತ್ತು ಐದನೇ ಶ್ರೇಯಾಂಕದ ಝೆಂಗ್ ಕ್ವಿನ್ವೆನ್ ಅವರು ಮಂಗಳವಾರ ಗಂಟುಮೂಟೆ ಕಟ್ಟಿದರು.

ಪುರುಷರ ಸಿಂಗಲ್ಸ್ನಲ್ಲಿ ಮೂರನೇ ಶ್ರೇಯಾಂಕದ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಏಳನೇ ಶ್ರೇಯಾಂಕದ ಲೊರೆಂಜೊ ಮುಸೆಟ್ಟಿ ಆರಂಭಿಕ ಸುತ್ತು ದಾಟಲು ವಿಫಲವಾದರು. ಡೆನ್ಮಾರ್ಕ್ನ ಹೋಲ್ಡರ್ ರೂನ್ (ಎಂಟನೇ ಶ್ರೇಯಾಂಕ) ಮತ್ತು ರಷ್ಯಾದ ಡೇನಿಯಲ್ ಮೆಡ್ವೆಡೇವ್ (ಒಂಬತ್ತನೇ) ಅವರು ಮೊದಲ ದಿನವೇ ನಿರ್ಗಮಿಸಿದ್ದರು.

ವಿಶ್ವದ ಅಗ್ರಮಾನ್ಯ ಆಟಗಾರ, ಇಟಲಿಯ ಯಾನಿಕ್ ಸಿನ್ನರ್ ನಿರಾಯಾಸ ವಾಗಿ ಎರಡನೇ ಸುತ್ತು ಪ್ರವೇಶಿಸಿದರೆ, ಐದನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಐದು ಸೆಟ್ಗಳ ಹೋರಾಟದಲ್ಲಿ ಪ್ರಯಾಸದ ಗೆಲುವು ಸಾಧಿಸಿದರು.

ಇಟಲಿಯ ಎಲಿಸಬೆಟ್ಟಾ ಕೊಕಿಯಾ ರೆಟ್ಟೊ 6-2, 6-3ರಿಂದ ಅಮೆರಿಕದ ಪೆಗುಲಾ ಅವರನ್ನು ಮಣಿಸಿದರು. 116ನೇ ರ್ಯಾಂಕ್ನ ಎಲಿಸಬೆಟ್ಟಾ ಕೇವಲ 58 ನಿಮಿಷದಲ್ಲಿ ಗೆಲುವು ಸಾಧಿಸಿದರು. 31 ವರ್ಷ ವಯಸ್ಸಿನ ಪೆಗುಲಾ ಐದು ವರ್ಷಗಳಲ್ಲಿ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯೊಂದರ ಮೊದಲ ಸುತ್ತಿನಲ್ಲೇ ಹೊರಬಿದ್ದರು. 2020ರ ಫ್ರೆಂಚ್ ಓಪನ್ನಲ್ಲಿ ಅವರು ಆರಂಭಿಕ ಸುತ್ತಿನಲ್ಲೇ ಸೋತಿದ್ದರು.

81ನೇ ಕ್ರಮಾಂಕದ ಕ್ಯಾಥರಿನಾ ಸಿನಿಯಕೋವಾ 7-5, 4-6, 6-1ರಿಂದ ಒಲಿಂಪಿಕ್ ಚಾಂಪಿಯನ್ ಝೆಂಗ್ ಅವರನ್ನು ಹಿಮ್ಮೆಟ್ಟಿಸಿದರು. 2 ಗಂಟೆ 25 ನಿಮಿಷ ನಡೆದ ಹಣಾಹಣಿಯಲ್ಲಿ ಝೆಕ್ ರಿಪಬ್ಲಿಕ್ನ ಕ್ಯಾಥರಿನಾ ಮೇಲುಗೈ ಸಾಧಿಸಿದರು.

ಜ್ವೆರೆವ್ಗೆ ಆಘಾತ: ಫ್ರಾನ್ಸ್ನ ಆರ್ಥರ್ ರಿಂಡರ್ನೆಕ್ 7-6 (7/3), 6-7 (8/10), 6-3, 6-7 (5/7), 6-4ರಿಂದ ಜರ್ಮನಿಯ ಜ್ವೆರೆವ್ ಅವರಿಗೆ ಆಘಾತ ನೀಡಿದರು. 28 ವರ್ಷ ವಯಸ್ಸಿನ ಜ್ವೆರೆವ್, 2019ರ ನಂತರ ಮೊದಲ ಬಾರಿಗೆ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಆರಂಭಿಕ ಸುತ್ತಿನಲ್ಲಿ ಹೊರಬಿದ್ದಿದ್ದಾರೆ. ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ ಸತತ ಒಂಬತ್ತನೇ ಬಾರಿ ಸ್ಪರ್ಧಿಸಿದ್ದ ಜ್ವರೆವ್ ಅವರಿಗೆ ಈತನಕ ನಾಲ್ಕನೇ ಸುತ್ತನ್ನು ದಾಟಲು ಸಾಧ್ಯವಾಗಿಲ್ಲ.

ಮುಸೆಟ್ಟಿ ನಿರ್ಗಮನ: ಜಾರ್ಜಿಯಾದ ಕ್ವಾಲಿಫೈಯರ್ ಆಟಗಾರ ನಿಕೋಲಸ್ ಬಸಿಲಾಶ್ವಿಲಿ 6-2, 4-6, 7-5, 6-1ರಿಂದ ಇಟಲಿಯ ಮುಸೆಟ್ಟಿ ಅವರಿಗೆ ಆಘಾತ ನೀಡಿದರು.

ಸಿನ್ನರ್ ಶುಭಾರಂಭ: ಇಟಲಿಯ ತಾರೆ ಸಿನ್ನರ್ ನೇರ ಸೆಟ್ಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿದರು. 23 ವರ್ಷ ವಯಸ್ಸಿನ ಅವರು 6-4, 6-3, 6-0 ರಿಂದ ಸ್ವದೇಶದ ಲುಕಾ ನಾರ್ಡಿ
ವಿರುದ್ಧ ಗೆದ್ದರು.

ಕಳೆದ ಆರು ಗ್ರ್ಯಾನ್ಸ್ಲಾಮ್ ಟೂರ್ನಿಗಳಲ್ಲಿ ಮೂರು ಪ್ರಶಸ್ತಿ ಗೆದ್ದಿರುವ ಇಟಲಿಯ ಆಟಗಾರ, ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ ಚೊಚ್ಚಲ ಪ್ರಶಸ್ತಿ ಎದುರು ನೋಡುತ್ತಿದ್ದಾರೆ. 2023ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಈವರೆಗಿನ ಉತ್ತಮ ಸಾಧನೆಯಾಗಿದೆ.

ಅಮೆರಿಕದ ಟೇಲರ್ 6-7 (6/8), 6-7 (8/10), 6-4, 7-6 (8/6), 6-4ರಿಂದ ಫ್ರಾನ್ಸ್ನ ಜಿಯೋವಾನಿ ಎಂಪೆಟ್ಶಿ ಪೆರಿಕಾರ್ಡ್ ವಿರುದ್ಧ; 11ನೇ ಶ್ರೇಯಾಂಕದ ಅಲೆಕ್ಸ್ ಡಿ ಮಿನೋರ್ (ಆಸ್ಟ್ರೇಲಿಯಾ) 6-2, 6-2, 7-6 (7/2)ರಿಂದ ರಾಬರ್ಟೊ ಕಾರ್ಬಲ್ಲೆಸ್ ಬೇನಾ (ಸ್ಪೇನ್) ವಿರುದ್ಧ ಗೆಲುವು ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.