ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2015 ವಿಶ್ವಕಪ್: ಆಸ್ಟ್ರೇಲಿಯಾಗೆ ಜಯ ತಂದಿತ್ತ ಫಾಕ್ನರ್,

Last Updated 29 ಮೇ 2019, 19:49 IST
ಅಕ್ಷರ ಗಾತ್ರ

ಲೀಗ್ ಹಂತದಲ್ಲಿ ಉತ್ತಮ ಸಾಮರ್ಥ್ಯ ತೋರಿದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್ ಪಂದ್ಯ ರೋಚಕವಾಗುವ ಕುತೂಹಲದಲ್ಲಿದ್ದ ಕ್ರಿಕೆಟ್ ಪ್ರಿಯರು ಮೆಲ್ಬರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಂಡದ್ದು ಏಕಪಕ್ಷೀಯವಾದ ಹಣಾಹಣಿಯನ್ನು. ಮಿಷೆಲ್ ಸ್ಟಾರ್ಕ್ ಇನ್ ಸ್ವಿಂಗ್ ಮತ್ತು ಜೇಮ್ಸ್ ಫಾಕ್ನರ್ ಅವರ ಎಡಗೈ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ ಮೈಕೆಲ್ ಕ್ಲಾರ್ಕ್ ಬಳಗಕ್ಕೆ ಸಂಪೂರ್ಣ ಶರಣಾಗಿತ್ತು. ಆಸ್ಟ್ರೇಲಿಯಾ ಐದನೇ ಬಾರಿ ಚಾಂಪಿಯನ್ ಪಟ್ಟದಲ್ಲಿ ವಿರಾಜಮಾನವಾಯಿತು.

* ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 45ನೇ ಓವರ್‌ನಲ್ಲೇ ಎಲ್ಲ ವಿಕೆಟ್ ಕಳೆದುಕೊಂಡಿತ್ತು. ಮೊದಲ ಓವರ್‌ನ ಐದನೇ ಎಸೆತದಲ್ಲಿ ನಾಯಕ ಬ್ರೆಂಡನ್ ಮೆಕ್ಲಂ ಮರಳಿದ್ದು ತಂಡಕ್ಕೆ ಆರಂಭದಲ್ಲೇ ಬಲವಾದ ಪೆಟ್ಟು ನೀಡಿತ್ತು. ಮಿಷೆಲ್ ಸ್ಟಾರ್ಕ್ ಅವರ ಇನ್ ಸ್ವಿಂಗರ್ ಮೆಕ್ಲಂಅವರ ಆಫ್ ಸ್ಪಂಪ್ ಎಗರಿಸಿತ್ತು. ಮೆಕ್ಲಂ ಸಾಧನೆ ಶೂನ್ಯವಾದರೆ, ತಂಡದ ಮೊತ್ತ ಆಗ ಒಂದು ರನ್ ಆಗಿತ್ತು.

* ಮಾರ್ಟಿನ್ ಗಪ್ಟಿಲ್ ಮತ್ತು ಕೇನ್ ವಿಲಿಯಮ್ಸನ್ 32 ರನ್ ಸೇರಿಸಿದರು. ಅಷ್ಟರಲ್ಲಿ ಗಪ್ಟಿಲ್ ಔಟಾದರು. ನಂತರ ಆರು ರನ್ ಸೇರಿಸುವಷ್ಟರಲ್ಲಿ ವಿಲಿಯಮ್ಸನ್ ಕೂಡ ಮರಳಿದರು. ರಾಸ್ ಟೇಲರ್ (40) ಮತ್ತು ಗ್ರ್ಯಾಂಟ್ ಎಲಿಯಟ್ (83) ನಡುವಿನ 111 ರನ್‌ಗಳ ಜೊತೆಯಾಟ ನ್ಯೂಜಿಲೆಂಡ್ ತಂಡಕ್ಕೆ ಮರುಜೀವ ನೀಡಿತು. ಆದರೆ 36ನೇ ಓವರ್‌ನಲ್ಲಿ ಈ ಇಬ್ಬರನ್ನೂ ಫಾಕ್ನರ್ ವಾಪಸ್ ಕಳುಹಿಸಿದ್ದು ಪಂದ್ಯದ ಮಹತ್ವದ ತಿರುವು. ನ್ಯೂಜಿಲೆಂಡ್ 183 ರನ್ ಗಳಿಗೆ ಆಲೌಟ್.

* ವಿಶ್ವಕಪ್‌ನಂಥ ಟೂರ್ನಿಯಲ್ಲಿ 183 ರನ್ ಕೂಡ ಸ್ಪರ್ಧಾತ್ಮಕ ಮೊತ್ತ ಆಗಬಲ್ಲುದು. ವಿಶೇಷವಾಗಿ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಮತ್ತು ಡ್ಯಾನಿಯಲ್ ವೆಟೋರಿ ಅವರಂಥ ಬೌಲರ್‌ಗಳಿದ್ದಾಗ. ಆದರೆ ಆಸ್ಟ್ರೇಲಿಯಾದ ಬಲಿಷ್ಠ ಬ್ಯಾಟಿಂಗ್ ಪಡೆಯ ಮೇಲೆ ಪರಿಣಾಮ ಬೀರಲು ನ್ಯೂಜಿಲೆಂಡ್‌ ಬೌಲರ್‌ಗಳಿಗೆ ಆಗಲಿಲ್ಲ.

* ಆ್ಯರನ್ ಫಿಂಚ್ ಎರಡನೇ ಓವರ್ನ‌ನಲ್ಲಿ ಔಟಾದಾಗ ತಂಡದ ಖಾತೆಯಲ್ಲಿದ್ದದ್ದು ಕೇವಲ ಎರಡು ರನ್. ಆದರೆ ಡೇವಿಡ್ ವಾರ್ನರ್ (45) ಮತ್ತು ಸ್ಟೀವ್ ಸ್ಮಿತ್ (74) ಅವರ 61 ರನ್ ಜೊತೆಯಾಟ ನ್ಯೂಜಿಲೆಂಡ್ ಪಾಳಯದ ಮೇಲೆ ಕರಿನೆರಳು ಮೂಡಿಸಿತು.

* ಸ್ಮಿತ್ ಮತ್ತು ಮೈಕೆಲ್ ಕ್ಲಾರ್ಕ್ ನಡುವಿನ 112 ರನ್‌ಗಳ ಜೊತೆಯಾಟವಂತೂ ನ್ಯೂಜಿಲೆಂಡ್ ತಂಡದ ಕನಸನ್ನು ನುಚ್ಚು ನೂರು ಮಾಡಿತು. 34ನೇ ಓವರ್‌ನ ಮೊದಲ ಎಸೆತದಲ್ಲಿ ಆಸ್ಟ್ರೇಲಿಯಾ ಜಯಭೇರಿ ಮೊಳಗಿಸಿತು. ಸ್ಮಿತ್ ಸ್ಮಿತ್ ಅಜೇಯವಾಗಿ ಉಳಿದರು. ಜೇಮ್ಸ್ ಫಾಕ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದರೆ, ಮಿಷೆಲ್ ಸ್ಟಾರ್ಕ್ ಸರಣಿಯ ಶ್ರೇಷ್ಠ ಆಟಗಾರ ಎನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT