ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಆಸ್ಟ್ರೇಲಿಯಾಕ್ಕೆ ಇಂದು ಅಫ್ಗಾನಿಸ್ತಾನ ಸವಾಲು

Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಅಕ್ಷರ ಗಾತ್ರ

ಕಿಂಗ್ಸ್‌ಟೌನ್: ಗೆಲುವಿನ ನಾಗಾಲೋಟದಲ್ಲಿರುವ ಆಸ್ಟ್ರೇಲಿಯಾ ತಂಡವು ಸೂಪರ್‌ ಎಂಟರ ಘಟ್ಟದ (ಗುಂಪು 1) ಪಂದ್ಯದಲ್ಲಿ ಭಾನುವಾರ ಅಫ್ಗಾನಿಸ್ತಾನ ತಂಡವನ್ನು ಎದುರಿಸಲಿದೆ.

ಭಾರತ ವಿರುದ್ಧ 47 ರನ್‌ಗಳಿಂದ ಸೋತಿರುವ ರಶೀದ್‌ ಖಾನ್‌ ಪಡೆಯು ಟೂರ್ನಿಯಲ್ಲಿ ಮುಂದಿನ ಹಾದಿಯನ್ನು ಜೀವಂತವಾಗಿರಿಸಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. 

ಬಾಂಗ್ಲಾದೇಶವನ್ನು ಒಳಗೊಂಡ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿರುವ ಅಫ್ಗನ್‌ ತಂಡವು ಸುಧಾರಿತ ಪ್ರದರ್ಶನದ ವಿಶ್ವಾಸದಲ್ಲಿದೆ. ಆಸ್ಟ್ರೇಲಿಯಾ ಮತ್ತು ಭಾರತ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.

ಸೂಪರ್‌ ಎಂಟರ ಘಟ್ಟದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 28 ರನ್‌ಗಳಿಂದ ಬಾಂಗ್ಲಾದೇಶವನ್ನು ಹಿಮ್ಮೆಟ್ಟಿಸಿತ್ತು. ಮಳೆಬಾಧಿತವಾದ ಆ ಪಂದ್ಯವನ್ನು ಡಕ್ವರ್ಥ್‌ ಲೂಯಿಸ್‌ ನಿಯಮದಡಿ ಆಸೀಸ್‌ ಪಡೆ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಇದೀಗ ಅಫ್ಗನ್‌ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್‌ ಹಾದಿಯನ್ನು ಸುಗಮಗೊಳಿಸುವತ್ತ ಮಿಚೆಲ್‌ ಮಾರ್ಷ್‌ ಪಡೆ ಚಿತ್ತ ಹರಿಸಿದೆ. ತಂಡದ ಸ್ಫೋಟಕ ಬ್ಯಾಟರ್‌ಗಳಾದ ಡೇವಿಡ್‌ ವಾರ್ನರ್‌ ಮತ್ತು ಟ್ರಾವಿಸ್‌ ಹೆಡ್‌ ಉತ್ತಮ ಲಯದಲ್ಲಿರುವುದು ತಂಡಕ್ಕೆ ವರದಾನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT