ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup 2023 | ಭಾರತದ ಗೆಲುವಿಗೆ 273 ರನ್ ಗುರಿ ನೀಡಿದ ಅಫ್ಗಾನಿಸ್ತಾನ

Published 11 ಅಕ್ಟೋಬರ್ 2023, 12:42 IST
Last Updated 11 ಅಕ್ಟೋಬರ್ 2023, 12:42 IST
ಅಕ್ಷರ ಗಾತ್ರ

ನವದೆಹಲಿ: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್ ಪಂದ್ಯದಲ್ಲಿ ಅಫ್ಗಾನಿಸ್ತಾನ ತಂಡ ಆತಿಥೇಯ ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದೆ.

ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಮಾಡಿದ ಅಫ್ಗಾನಿಸ್ತಾನ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂದು 272 ರನ್ ಕಲೆಹಾಕಿದೆ.

ಇನಿಂಗ್ಸ್‌ ಆರಂಭಿಸಿದ ಅಫ್ಗಾನಿಸ್ತಾನ ಪರ ಆರಂಭಿಕ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಆದರೆ, ಮಧ್ಯಮ ಕ್ರಮಾಂಕದ ಹಷ್ಮತ್‌ಉಲ್ಲಾ ಶಾಹಿದಿ ಹಾಗೂ ಅಜ್ಮತ್‌ಉಲ್ಲಾ ಒಮರ್‌ಝೈ ಅವರು ತಮ್ಮ ತಂಡದ ಇನಿಂಗ್ಸ್‌ಗೆ ಬಲ ತುಂಬಿದರು.

ಆಕರ್ಷಕ ಅರ್ಧಶತಕ ಗಳಿಸಿದ ಈ ಇಬ್ಬರು ನಾಲ್ಕನೇ ವಿಕೆಟ್‌ಗೆ 121 ರನ್‌ ಕಲೆಹಾಕುವ ಮೂಲಕ, ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು.

ಶಾಹಿದಿ 88 ಎಸೆತಗಳಲ್ಲಿ 80 ರನ್‌ ಗಳಿಸಿದರೆ, ಒಮರ್‌ಝೈ 69 ಎಸೆತಗಳಲ್ಲಿ 62 ರನ್ ಬಾರಿಸಿದರು. ಹೀಗಾಗಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು.

ಸಿರಾಜ್ ದುಬಾರಿ

ಏಕದಿನ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಮೊಹಮ್ಮದ್‌ ಸಿರಾಜ್‌ ದುಬಾರಿಯಾದರು. 9 ಓವರ್‌ ಬೌಲಿಂಗ್‌ ಮಾಡಿದ ಅವರು 8.40 ಸರಾಸರಿಯಲ್ಲಿ 76 ರನ್‌ ಬಿಟ್ಟುಕೊಟ್ಟರೂ, ವಿಕೆಟ್‌ ಪಡೆಯಲು ವಿಫಲರಾದರು.

ಜಸ್‌ಪ್ರಿತ್‌ ಬೂಮ್ರಾ 39 ರನ್‌ ನೀಡಿ 4 ವಿಕೆಟ್‌ ಪಡೆದರೆ, ಹಾರ್ದಿಕ್‌ ಪಾಂಡ್ಯ 2 ವಿಕೆಟ್‌ ಕಿತ್ತರು. ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT