ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಇಂಜಮಾಮ್ ಉಲ್ ಹಕ್ ಸೋಮವಾರ ರಾಜೀನಾಮೆ ನೀಡಿದ್ದಾರೆ. ಹಿತಾಸಕ್ತಿ ಸಂಘರ್ಷ ಆರೋಪ ಎದುರಿಸುತ್ತಿರುವ ಕೆಲವು ರಾಷ್ಟ್ರೀಯ ತಂಡದ ಆಟಗಾರರನ್ನು ನಿರ್ವಹಿಸುವ ಕಂಪನಿ ಜತೆ ಅವರ ಸಖ್ಯದ ಕುರಿತು ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ತನಿಖೆಗೆ ಸೂಚಿಸಿರುವುದರ ಬೆನ್ನಲ್ಲೇ ಇಂಜಮಾಮ್ ಈ ನಿರ್ಧಾರ ಕೈಗೊಂಡಿದ್ದಾರೆ.
ಯಾಝೂ ಇಂಟರ್‌ನ್ಯಾಷನಲ್ ಹೆಸರಿನ ಕಂಪನಿಯ ಜೊತೆ ಇಂಜಮಾಮ್ ಹೊಂದಿರುವ ಪಾತ್ರದ ಬಗ್ಗೆ ತನಿಖೆ ನಡೆಸಲು ಪಿಸಿಬಿ ಐವರು ಸದಸ್ಯರ ಸಮಿತಿ ರಚಿಸಿದೆ. ನಾಯಕ ಬಾಬರ್ ಆಜಂ, ವೇಗಿ ಶಹೀನ್ ಶಾ ಅಫ್ರೀದಿ ಮತ್ತು ವಿಕೆಟ್ ಕೀಪರ್ ಮೊಹ ಮ್ಮದ್ ರಿಜ್ವಾನ್ ಅವರನ್ನು ನಿರ್ವಹಿಸುವ ಈ ಕಂಪನಿಯ ಏಜಂಟ್ ಇಂಜಮಾಮ್ ಅವರಿಗೂ ಏಜಂಟ್ ಆಗಿದ್ದಾರೆ.
ವಿಶ್ವಕಪ್ ನಡೆಯುತ್ತಿರುವ ಮಧ್ಯದಲ್ಲೇ ಇಂಜಮಾಮ್ ರಾಜೀನಾಮೆ ಸಲ್ಲಿಸಬೇಕಾಗಿ ಬಂದಿದೆ.
ಏಜಂಟ್ ಮತ್ತು ಪಾಲುದಾರ ತಲ್ಹಾ ರೆಹಮಾನಿ ಅವರೊಂದಿಗಿನ ಸಂಬಂಧದಿಂದ, ಆಯ್ಕೆಗಾರನಾಗಿ ತಾವು ಕೈಗೊಂಡಿರುವ ಯಾವುದೇ ನಿರ್ಧಾರದಲ್ಲಿ ರಾಜಿಯಾಗಲಿ, ಪರಿ ಣಾಮವಾಗಲಿ ಆಗಿಲ್ಲ ಎಂದು ಇಂಜ ಮಾಮ್ ಸಮರ್ಥಿಸಿಕೊಂಡಿದ್ದಾರೆ.