ಧಾರವಾಡ: ದಕ್ಷಿಣ ಕನ್ನಡ ಜಿಲ್ಲಾ ತಂಡ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಗಳಿಸಿದ ತಲಾ ಮೂರು ಚಿನ್ನದ ಪದಕಗಳೊಂದಿಗೆ ಇಲ್ಲಿ ಸೋಮವಾರ ಆರಂಭಗೊಂಡ ಪಿಯು ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ ಕೂಟದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಟದ ಮೊದಲ ದಿನ ದಕ್ಷಿಣ ಕನ್ನಡದ ಬಾಲಕರು ಫೀಲ್ಡ್‌ನಲ್ಲಿ ಮಿಂಚಿದರೆ ಬಾಲಕಿಯರು ಟ್ರ್ಯಾಕ್‌ನಲ್ಲಿ ಹೆಚ್ಚು ಪಾಯಿಂಟ್ ತಂದುಕೊಟ್ಟರು.

ಕೂಟದ ಮೊದಲ ಸ್ಪರ್ಧೆಯಾದ ಬಾಲಕರ 100 ಮೀಟರ್ಸ್ ಓಟದಲ್ಲಿ ಆತಿಥೇಯ ಧಾರವಾಡದ ಪವನ್ ಕುಮಾರ್ ಎಸ್.ಕೆ. ಚಿನ್ನಕ್ಕೆ ಮುತ್ತಿಟ್ಟರೆ ಬಾಲಕಿಯರ ಮೊದಲ ಸ್ಪರ್ಧೆಯಾದ ಲಾಂಗ್ ಜಂಪ್‌ನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಅಭಿಮತಿ ಎಸ್.ನಾಥನ್ ಬಂಗಾರ ಗಳಿಸಿದರು.

ಫಲಿತಾಂಶಗಳು: ಬಾಲಕರ ವಿಭಾಗ: 100 ಮೀಟರ್ಸ್ ಓಟ: ಪವನ್ ಕುಮಾರ ಎಸ್.ಕೆ. (ಧಾರವಾಡ)–1, ರಿತೇಶ ಶೆಟ್ಟಿ–2, ಗೌರೀಶ ನಾಗೇಂದ್ರ (ಇಬ್ಬರೂ ದಕ್ಷಿಣ ಕನ್ನಡ)–3. ಸಮಯ 10:64ಸೆ; 800 ಮೀಟರ್ಸ್ ಓಟ: ನವೀನ್ ಗೌಡ ಸಿ. (ದ.ಕ)–1, ಸುದರ್ಶನ ವಿ. (ದ.ಕ.)–2, ಶರತ್ ಬಿ. (ಬೆಂಗಳೂರು ದಕ್ಷಿಣ)–3. ಸಮಯ 2:01.88 ಸೆ; 5000 ಮೀಟರ್ಸ್ ಓಟ: ಯಲ್ಲಪ್ಪ ಎಂ. ಬೆಳ್ಳಿಕುಂಪಿ (ಧಾರವಾಡ)–1, ಪರಶುರಾಮ ಆರ್. ನಾಟೇಕರ (ಬೆಳಗಾವಿ)–2, ಸೈದಪ್ಪ ಮ್ಯಾಗೇರಿ (ಬಾಗಲಕೋಟೆ)–3. ಸಮಯ 16:30.74 ಸೆ; ಡಿಸ್ಕಸ್ ಥ್ರೋ: ವಿವೇಕ ಅಡಿಗ (ದ.ಕ)–1, ಶರತ್ ಬಾಬು (ದ.ಕ.)–2, ರೋಹಿತ್ (ಧಾರವಾಡ)–3. ದೂರ 36.81 ಮೀ; ಲಾಂಗ್ ಜಂಪ್‌್: ಸಿದ್ಧಾರ್ಥ ನಾಯಕ (ದ.ಕ)–1, ಧೀರಜ್ (ದ.ಕ.)–-2, ರಾಕೇಶ ಆರ್. (ಮೈಸೂರು)–3. ದೂರ 6.82 ಮೀ.

ಬಾಲಕಿಯರ ವಿಭಾಗ–100 ಮೀಟರ್ಸ್ ಓಟ: ಮೇಘಾ–1, ವರ್ಷಾ–-2 (ಇಬ್ಬರೂ ದ.ಕ.), ಲಕ್ಷ್ಮೀ ಬ್ಯಾಡಗಿ (ಬೆಳಗಾವಿ)–3. ಸಮಯ 12.55 ಸೆ; 800 ಮೀಟರ್ಸ್ ಓಟ: ಎ.ಎ. ಲಿಖಿತಾ (ದ.ಕ)–-1, ಪ್ರಿಯಾಂಕಾ ವಿ. (ಮೈಸೂರು)–-2, ಶ್ರೀಕಲಾ (ಬೆಂಗಳೂರು ಉತ್ತರ)–3. ಸಮಯ 2:28.58 ಸೆ; 5000 ಮೀಟರ್ಸ್ ಓಟ: ಸೌಮ್ಯಾ ಕೆ (ದ.ಕ)–1, ಶ್ರುತಿ ಎಚ್.ಡಿ. (ದ.ಕ)–2, ತಾರಾಮಣಿ ಎಚ್.ಆರ್. (ಮೈಸೂರು)–-3. ಸಮಯ 2:39.54 ಸೆ; ಶಾಟ್‌ಪಟ್: ಉಮಾ ಪಿ.ಎಸ್. (ಮೈಸೂರು)–1, ನಮಿತಾ ಜಿ.ಕೆ. (ದ.ಕ.)–2, ರಂಜನಾ ಬಡವಿ (ಧಾರವಾಡ)–3. ದೂರ 12:05 ಮೀ; ಲಾಂಗ್‌ಜಂಪ್: ಅಭಿಮತಾ ಎಸ್. ನಾಥನ್ (ಬೆಂ. ದಕ್ಷಿಣ)–1, ಅಕ್ಷತಾ ಪಿ.ಎಸ್(ದ.ಕ.)–2, ಪುಷ್ಪಾಂಜಲಿ ಎಸ್ (ಧಾರವಾಡ )-–3. ದೂರ 5.11 ಮೀ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.