ಮೀರ್ಪುರ (ಪಿಟಿಐ): ಭಾರತ ವಿರುದ್ಧ ಲಭಿಸಿದ ರೋಚಕ ಗೆಲುವಿನಿಂದ ಬೀಗುತ್ತಿರುವ ಪಾಕಿಸ್ತಾನ ತಂಡದವರು ಇಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಮಂಗಳವಾರ ಬಾಂಗ್ಲಾದೇಶವನ್ನು ಎದುರಿಸಲಿದ್ದಾರೆ.

ಈ ಪಂದ್ಯ ಷೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ 9 ಪಾಯಿಂಟ್ ಹೊಂದಿ ರುವ ಪಾಕಿಸ್ತಾನ ತಂಡದವರು ಫೈನಲ್ ಪ್ರವೇಶದ ಹೊಸ್ತಿಲಲ್ಲಿದ್ದಾರೆ. ಬಾಂಗ್ಲಾ ಎದುರು ಗೆದ್ದರೆ ಅದು ಖಚಿತವಾಗುತ್ತದೆ. ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಮಿಸ್ಬಾ ಉಲ್ ಹಕ್ ಬಳಗ ಎರಡನೇ ಸ್ಥಾನದಲ್ಲಿದೆ.

13 ಪಾಯಿಂಟ್ ಹೊಂದಿರುವ ಶ್ರೀಲಂಕಾ ತಂಡದವರು ಈಗಾಗಲೇ ಫೈನಲ್ ತಲುಪಿದ್ದಾರೆ. ಆದರೆ ಮೂರು ಪಂದ್ಯಗಳಿಂದ ಕೇವಲ ನಾಲ್ಕು ಪಾಯಿಂಟ್ ಹೊಂದಿರುವ ಭಾರತ ಬಹುತೇಕ ಟೂರ್ನಿಯಿಂದ ಹೊರ ಬಿದ್ದಿದೆ. ಬುಧವಾರ ನಡೆಯಲಿರುವ ಆಫ್ಘಾನಿಸ್ತಾನ ಎದುರಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಉತ್ತಮ ರನ್ರೇಟ್ ಹಾಗೂ ಬೋನಸ್ ಪಾಯಿಂಟ್ನೊಂದಿಗೆ ಗೆದ್ದರೂ ಫೈನಲ್ ತಲುಪುವುದು ಕಷ್ಟವಿದೆ. ಏಕೆಂದರೆ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾ ಎದುರು ಗೆದ್ದರೆ ಪಾಕ್ ಅಂತಿಮ ಘಟ್ಟ ಪ್ರವೇಶಿಸಲಿದೆ.

ಆರಂಭ: ಮಧ್ಯಾಹ್ನ 1.30ಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.