ಬೆಂಗಳೂರು: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಕರ್ನಾಟಕ ವೃತ್ತದ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನವೆಂಬರ್ 5 ಮತ್ತು 6 ರಂದು 11ನೇ ಅಖಿಲ ಭಾರತ ಬಿಎಸ್ಎನ್ಎಲ್ ಹಾಕಿ ಟೂರ್ನಿ ನಡೆಯಲಿದೆ.

ಅಕ್ಕಿತಿಮ್ಮನಹಳ್ಳಿಯಲ್ಲಿರುವ ಹಾಕಿ ಕ್ರೀಡಾಂಗಣದಲ್ಲಿ ಎಲ್ಲ ಪಂದ್ಯಗಳು ನಡೆಯಲಿವೆ. ಆತಿಥೇಯ ಕರ್ನಾಟಕ ಮತ್ತು ಹಾಲಿ ಚಾಂಪಿಯನ್ ಜಾರ್ಖಂಡ್ ಒಳಗೊಂಡಂತೆ ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ ಎಂದು ಬಿಎಸ್ಎನ್ಎಲ್ ಕರ್ನಾಟಕದ ವೃತ್ತದ ಚೀಫ್ ಜನರಲ್ ಮ್ಯಾನೇಜರ್ ಪಿ. ರಾಘವನ್ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸತತ ಎರಡು ಸಲ ರನ್ನರ್ ಅಪ್ ಆಗಿರುವ ಕರ್ನಾಟಕ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಟೂರ್ನಿಯ ಪಂದ್ಯಗಳು ನಾಕೌಟ್ ಮಾದರಿಯಲ್ಲಿ ನಡೆಯಲಿವೆ. ಬೆಂಗಳೂರು ಟೆಲಿಕಾಂನ ಜನರಲ್ ಮ್ಯಾನೇಜರ್ ಶುಭೇಂದು ಘೋಷ್ ಮತ್ತು ಬಿಎಸ್ಎನ್ಎಲ್ ಕರ್ನಾಟಕ ವೃತ್ತದ ಕಾರ್ಯದರ್ಶಿ ಕೆ.ಬಿ. ಗಣೇಶ್ ಬಾಬು ಹಾಜರಿದ್ದರು.

ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಂಟು ತಂಡಗಳು: ಕರ್ನಾಟಕ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಎನ್ಟಿಆರ್ ನವದೆಹಲಿ, ಪಂಜಾಬ್, ಒಡಿಶಾ, ಜಾರ್ಖಂಡ್, ಎಂಟಿಎನ್ಎಲ್ ನವದೆಹಲಿ

ಕರ್ನಾಟಕ ತಂಡ ಹೀಗಿದೆ: ಮೋತಿಲಾಲ್ ರಾಥೋಡ್, ಎಚ್.ಸಿ. ಅಶೋಕ್, ಫೆಲಿಕ್ಸ್ ಅಲ್ವಿನ್, ಜಾರ್ಜ್ ಡೊಮಿನಿಕ್, ಆರ್. ಖಾಜಾ ರಿಯಾಜುದ್ದೀನ್, ಕೆ.ಟಿ. ಗಣಪತಿ, ಬಿ.ವಿ. ಅಶೋಕ, ಪ್ರಫುಲ್ ಕುಜೂರ್, ಮೊಹಮ್ಮದ್ ನಜೀಮ್ ಎ ಬೆಪಾರಿ, ಜೆ. ಕೋದಂಡಪಾಣಿ, ಟಿ.ಜೆ. ಬೋಪಣ್ಣ, ಎಸ್. ಕಬಿಲನ್, ಒ.ಇ. ತಿಮ್ಮಯ್ಯ, ಎಂ.ಎ. ವಿನೋದ್, ಸೈಯದ್ ಮುದಸ್ಸೀರ್ ಅಹ್ಮದ್, ಬೆನಡಿಕ್ಟ್ ವಿನೋದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.