ನವದೆಹಲಿ (ಐಎಎನ್ಎಸ್): ಹಾಕಿ ಇಂಡಿಯಾ (ಎಚ್ಐ) ಕಾರ್ಯದರ್ಶಿ ನರೀಂದರ್ ಬಾತ್ರ ಅವರ ಏಷ್ಯನ್ ಹಾಕಿ ಫೆಡರೇಷನ್ನ (ಎಎಚ್ಎಫ್) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕ್ವಾಲಾಲಾಂಪುರದಲ್ಲಿ ಭಾನುವಾರ ನಡೆದ ಎಎಚ್ಎಫ್ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಕಣದಲ್ಲಿದ್ದ 11 ಸ್ಪರ್ಧಿಗಳಲ್ಲಿ ಬಾತ್ರ ಅವರು ಎರಡನೇ ಅತಿಹೆಚ್ಚು ಮತಗಳನ್ನು ಪಡೆದರು.ಸುಲ್ತಾನ್ ಅಜ್ಲಾನ್ ಶಾ ಅವರು ಅಧ್ಯಕ್ಷರಾಗಿ ಮರು ಆಯ್ಕೆಯಾದರು ಎಂದು ಎಚ್ಐ ಹೇಳಿಕೆ ತಿಳಿಸಿದೆ.