ನವದೆಹಲಿ (ಪಿಟಿಐ): ಕರ್ನಾಟಕದ ಶರವಣನ್ ಕಿರಣ್ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ (ಎಐಎಫ್ಎಫ್) ಅಕಾಡೆಮಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಈ ತಂಡ 14 ವರ್ಷ ವಯಸ್ಸಿನೊಳಗಿನವರ ಸಾರ್ಕ್ ಕಾರ್ಯಕ್ರಮದ ಟೂರ್ನಿಯೊಂದರಲ್ಲಿ ಪಾಲ್ಗೊಳ್ಳಲು ಜಪಾನ್ಗೆ ಪ್ರಯಾಣ ಬೆಳೆಸಿದೆ. ಅಕ್ಟೋಬರ್ 20ರವರೆಗೆ ಈ ಟೂರ್ನಿ ನಡೆಯಲಿದೆ. ಈ ತಂಡದಲ್ಲಿ ಒಟ್ಟು 16 ಮಂದಿ ಆಟಗಾರರು ಇದ್ದಾರೆ.