ಶಿರಸಿ (ಉತ್ತರಕನ್ನಡ ಜಿಲ್ಲೆ): ಬೆಳಗಾವಿ ಹಾಗೂ ಮೈಸೂರು ಜಿಲ್ಲೆಯ ತಂಡಗಳು ಇಲ್ಲಿನ ಮಾರಿಕಾಂಬಾ ಕ್ರೀಡಾಂಗಣದಲ್ಲಿ ಸೋಮವಾರ ಮುಕ್ತಾಯಗೊಂಡ ರಾಜ್ಯ ಮಟ್ಟದ ಪೈಕಾ ಕ್ರೀಡಾಕೂಟದಲ್ಲಿ ಕ್ರಮವಾಗಿ 16 ವರ್ಷದ ಒಳಗಿನ ಬಾಲಕ–ಬಾಲಕಿಯರ ವಿಭಾಗದ ಕೊಕ್ಕೊ ಹಣಾಹಣಿಯಲ್ಲಿ ಚಾಂಪಿಯನ್ ಆದವು.

ಕಬಡ್ಡಿ ವಿಭಾಗದಲ್ಲಿ ಮಂಗಳೂರಿನ ಬಾಲಕ–ಬಾಲಕಿಯರ ತಂಡಗಳು ಪ್ರಶಸ್ತಿ ಜಯಿಸಿದವು. ಕೊಕ್ಕೊ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾಶಾಲೆಯ ಪ್ರವೀಣ ಅಪ್ಪಿನಬೈಲ್ ನಾಯಕತ್ವದ ತಂಡವು 21–20 ಅಂಕಗಳಿಂದ ಶಿವಮೊಗ್ಗ ಜಿಲ್ಲೆ ತಂಡವನ್ನು ಮಣಿಸಿತು. ದಾವಣಗೆರೆ ಜಿಲ್ಲೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಬಾಲಕಿಯರ ವಿಭಾಗದಲ್ಲಿ ಎಲ್ಲರ ಗಮನ ಸೆಳೆದಿದ್ದ ನಮೃತಾ ಕೆ.ಎಮ್. ನಾಯಕತ್ವದ ಮೈಸೂರು ಜಿಲ್ಲಾ ಕೊಕ್ಕೊ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಬೆಳಗಾವಿ ಜಿಲ್ಲಾ ತಂಡವನ್ನು 10–9 ಅಂಕಗಳಿಂದ ಮಣಿಸಿತು. ಶಿವಮೊಗ್ಗ ಜಿಲ್ಲೆ ಮೂರನೇ ಸ್ಥಾನ ಪಡೆಯಿತು.

ಕಬಡ್ಡಿ ವಿಭಾಗದಲ್ಲಿ ಮಂಗಳೂರಿನ ಬಾಲಕರು 39–21 ಅಂಕಗಳಿಂದ ದಾವಣಗೆರೆ ಬಾಲಕರನ್ನು ಮಣಿಸಿದರೆ, ಬಾಲಕಿಯರು 55–15 ಅಂಕಗಳ ಭರ್ಜರಿ ಅಂತರದಿಂದ ಚಿಕ್ಕಮಗಳೂರು ತಂಡವನ್ನು ಸೋಲಿಸಿದರು. ಕೋಲಾರದ ಬಾಲಕರ ತಂಡ ಹಾಗೂ ಚಿಕ್ಕಬಳ್ಳಾಪುರ ಬಾಲಕಿಯರ ತಂಡ ತೃತೀಯ ಸ್ಥಾನ ಗಳಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.