ಕೋಲ್ಕತ್ತ (ಪಿಟಿಐ): ನ್ಯೂ ಸೌತ್ ವೇಲ್ಸ್ ತಂಡವು `ಚುಟುಕು~ ಕ್ರಿಕೆಟ್ನಲ್ಲಿ ಬಲಾಢ್ಯ. ಆದರೆ ಕಾಗದದ ಮೇಲಿನ ಈ ಲೆಕ್ಕಾಚಾರ ಅಂಗಳದಲ್ಲಿ ನಿಜವಾಗಲಿಲ್ಲ. ಎದುರಾಳಿ ಕೇಪ್ ಕೋಬ್ರಾಸ್ ಪಡೆಯ ಯೋಜಿತ ಆಟವೇ ಪ್ರಭಾವಿ ಎನಿಸಿತು.

ಬಿಗುವಿನ ಬೌಲಿಂಗ್ ದಾಳಿ ನಡೆಸಿದ ಕೋಬ್ರಾಸ್ ತಂಡದವರು ಸೈಮನ್ ಕ್ಯಾಟಿಚ್ ನಾಯಕತ್ವದ ವೇಲ್ಸ್ ತಂಡ ದೊಡ್ಡ ಮೊತ್ತ ಗಳಿಸದಂತೆ ತಡೆದರು. ಆಗಲೇ ನೆಚ್ಚಿನ ತಂಡಕ್ಕೆ ಆಘಾತ ಖಚಿತ ಎನ್ನುವುದೂ ಸ್ಪಷ್ಟವಾಗಿಬಿಟ್ಟಿತು. ಆನಂತರವೂ ಎಲ್ಲ ಕೋಬ್ರಾಗಳ ನಿರೀಕ್ಷೆಯಂತೆಯೇ ನಡೆಯಿತು. ಏಳು ವಿಕೆಟ್ಗಳ ಅಂತರದಿಂದ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಟೂರ್ನಿಯ ತನ್ನ ಮೊದಲ ಪಂದ್ಯವನ್ನು ಗೆದ್ದು ಸಂಭ್ರಮಿಸಿದ ಕೋಬ್ರಾಸ್ಗೆ ಬ್ಯಾಟಿಂಗ್ ವಿಭಾಗದಲ್ಲಿಯೂ ಕೊರತೆ ಕಾಡಲಿಲ್ಲ.

ಟಾಸ್ ಸೋತರೂ ಬಹಳಷ್ಟು ಎಚ್ಚರಿಕೆಯಿಂದ ಪಂದ್ಯದ ಯೋಜನೆ ರೂಪಿಸಿದ ಕೋಬ್ರಾಸ್ ನಾಯಕ ಜಸ್ಟಿನ್ ಕೆಂಪ್ ಎಲ್ಲಿಯೂ ಲೆಕ್ಕ ತಪ್ಪಲಿಲ್ಲ. ವೇಲ್ಸ್ನವರು ಅಬ್ಬರದಿಂದ ಬ್ಯಾಟ್ ಬೀಸುವುದಕ್ಕೆ ಅವಕಾಶ ಸಿಗದಂತೆ ಕ್ಷೇತ್ರ ರಕ್ಷಣೆಯ ಬಲೆ ಹೆಣೆದರು. ಅದರ ಪರಿಣಾಮ 20 ಓವರುಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡ ಕ್ಯಾಟಿಚ್ ಬಳಗದವರು 135 ರನ್ ಮಾತ್ರ ಗಳಿಸಿ ಚಡಪಡಿಸಿದರು.

ಮೊದಲ ಮೂರು ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಡೇವಿಡ್ ವಾರ್ನರ್, ಶೇನ್ ವ್ಯಾಟ್ಸನ್ ಮತ್ತು ಡೇನಿಯಲ್ ಸ್ಮಿತ್ ಅವರೂ ನಿರಾತಂಕವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಇಂಥ ಸ್ಥಿತಿಯಲ್ಲಿ ವೇಲ್ಸ್ ನೂರೈವತ್ತು ರನ್ ಗಡಿ ದಾಟಲು ಕೂಡ ಆಗಲಿಲ್ಲ. ತಲಾ ಎರಡು ವಿಕೆಟ್ ಕೆಡವಿದ ಕಾರ್ಲ್ ಲಾಂಗ್ವೆಲ್ಟ್ ಹಾಗೂ ವೆರ್ನೊನ್ ಫಿಲ್ಯಾಂಡರ್ ಅವರು ವೇಲ್ಸ್ ಬ್ಯಾಟ್ಸ್ಮನ್ಗಳ ಉತ್ಸಾಹ ಕುಗ್ಗಿಸಿಬಿಟ್ಟರು. ಆಗಲೇ ಮೊದಲ ಪಂದ್ಯದಲ್ಲಿ ಎರಡು ಪಾಯಿಂಟ್ಸ್ ಗಿಟ್ಟಿಸುವ ಕನಸು ಕೋಬ್ರಾಸ್ ಮನದಲ್ಲಿ ಗಟ್ಟಿ.

ಗೆಲುವಿನ ಗುರಿಯನ್ನು ಬೆನ್ನಟ್ಟಿದ ಕೇಪ್ ಕೋಬ್ರಾಸ್ ಪರ ಮೊದಲ ವಿಕೆಟ್ ಜೊತೆಯಾಟವು 88 ರನ್ಗೆ ವಿಸ್ತರಿಸಿದಾಗಲೇ ಜಯದ ಹಾದಿ ಸುಗಮ. `ಪಂದ್ಯ ಶ್ರೇಷ್ಠ~ ಗೌರವ ಪಡೆದ ಹರ್ಷೆಲ್ ಗಿಬ್ಸ್ (55; 47 ಎ., 5 ಬೌಂಡರಿ, 2 ಸಿಕ್ಸರ್) ಹಾಗೂ ರಿಚರ್ಡ್ ಲೇವಿ (43; 27 ಎ., 6 ಬೌಂಡರಿ, 1 ಸಿಕ್ಸರ್) ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ವಿಜಯದ ಕಳಶ ಇಡುವುದು ಜೆನ್ ಪಾಲ್ ಡುಮಿನಿ ಹಾಗೂ ಜಸ್ಟಿನ್ ಆಂಟೊಂಗ್ ಅವರಿಗೆ ಕಷ್ಟವಾಗಲೇ ಇಲ್ಲ.

ಸಂಕ್ಷಿಪ್ತ ಸ್ಕೋರ್: ನ್ಯೂ ಸೌತ್ ವೇಲ್ಸ್: 20 ಓವರುಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 135 (ಡೇವಿಡ್ ವಾರ್ನರ್ 20, ಶೇನ್ ವ್ಯಾಟ್ಸನ್ 34, ಡೇನಿಯಲ್ ಸ್ಮಿತ್ 24, ಮೊಸೆಸ್ ಹೆನ್ರಿಕ್ಸ್ 18; ಡೆಲ್ ಸ್ಟೇನ್ 26ಕ್ಕೆ1, ಕಾರ್ಲ್ ಲಾಂಗ್ವೆಲ್ಟ್ 38ಕ್ಕೆ2, ವೆರ್ನೊನ್ ಫಿಲ್ಯಾಂಡರ್ 21ಕ್ಕೆ2, ಜಸ್ಟಿನ್ ಕೆಂಪ್ 18ಕ್ಕೆ1); ಕೇಪ್ ಕೋಬ್ರಾಸ್: 17.2 ಓವರುಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 136 (ರಿಚರ್ಡ್ ಲೇವಿ 43, ಹರ್ಷೆಲ್ ಗಿಬ್ಸ್ 55, ಓವೈಸ್ ಷಾ 3, ಜೆನ್ ಪಾಲ್ ಡುಮಿನಿ ಔಟಾಗದೆ 14, ಜಸ್ಟಿನ್ ಆಂಟೊಂಗ್ ಔಟಾಗದೆ 11; ಮೊಸೆಸ್ ಹೆನ್ರಿಕ್ಸ್ 20ಕ್ಕೆ1, ಸ್ಮಿತ್ 27ಕ್ಕೆ1). ಫಲಿತಾಂಶ: ಕೋಬ್ರಾಸ್ಗೆ 7 ವಿಕೆಟ್ ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.