ಸೌಥ್ಯಾಂಪ್ಟನ್: ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಸೋಲಿನ ಸರಪಳಿಗೆ ಮತ್ತೊಂದು ಕೊಂಡಿ ಸೇರಿಕೊಂಡಿದೆ. ಗೆಲುವಿಗಾಗಿ ಎಂ.ಎಸ್.ದೋನಿ ಪಡೆ ನಡೆಸುತ್ತಿರುವ ಯಾವುದೇ ಪ್ರಯತ್ನ ಸಫಲವಾಗುತ್ತಿಲ್ಲ.

ಮಂಗಳವಾರ ಮಳೆಯಿಂದ ಅಡಚಣೆಗೆ ಒಳಗಾದ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳ ಸೋಲು ಕಂಡಿದೆ. ಇದರೊಂದಿಗೆ ಇಂಗ್ಲೆಂಡ್ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ರೋಸ್ ಬೌಲ್ ಕ್ರೀಡಾಂಗಣದಲ್ಲಿ ಭಾರತದ ನೀಡಿದ 188 ರನ್‌ಗಳ ಗುರಿಯನ್ನು ಆತಿಥೇಯ ಇಂಗ್ಲೆಂಡ್ 22.1 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ತಲುಪಿತು. ನಾಯಕ ಅಲಸ್ಟರ್ ಕುಕ್ (ಔಟಾಗದೆ 80; 63 ಎಸೆತ, 5 ಬೌಂಡರಿ, 1 ಸಿಕ್ಸ್) ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಹೊನಲು ಬೆಳಕಿನ ಈ ಪಂದ್ಯ ಆರಂಭದಲ್ಲೆ ಮಳೆ ಅಡ್ಡಿಯಾಯಿತು. ಹಾಗಾಗಿ ಪಂದ್ಯವನ್ನು ತಲಾ 23 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.

ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಪಾರ್ಥಿವ್ ಪಟೇಲ್ (28; 18 ಎಸೆತ, 3 ಬೌಂ, 1 ಸಿ.) ಹಾಗೂ ಅಜಿಂಕ್ಯಾ ರಹಾನೆ ಉತ್ತಮ ಆರಂಭ ನೀಡಿದರು. ಪ್ರವಾಸದ ತಮ್ಮ ಮೂರನೇ ಪಂದ್ಯದಲ್ಲೂ ರಹಾನೆ (54; 47 ಎಸೆತ, 5 ಬೌ, 1 ಸಿ.) ಮಿಂಚಿದರು.

ರಾಹುಲ್ ದ್ರಾವಿಡ್ (32; 31 ಎಸೆತ) ಹಾಗೂ ಕೊನೆಯಲ್ಲಿ ಸುರೇಶ್ ರೈನಾ (40; 19 ಎಸೆತ, 3 ಬೌ, 3 ಸಿ.) ತಂಡದ ಮೊತ್ತ ಹೆಚ್ಚಿಸಿದರು.

ಆದರೆ ಬೌಲರ್‌ಗಳ ಎಡವಟ್ಟು ತಂಡವನ್ನು ಸೋಲಿನ ದವಡೆಗೆ ನೂಕಿತು. ಕುಕ್ ಹಾಗೂ ಕ್ರೇಗ್ ಕೀಸ್‌ವೆಟರ್ (46) ಮೊದಲ ವಿಕೆಟ್‌ಗೆ 38 ಎಸೆತಗಳಲ್ಲಿ 67 ರನ್ ಸೇರಿಸಿ ಇಂಗ್ಲೆಂಡ್ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟರು. ಪ್ರವಾಸಿ ತಂಡದ ಎಲ್ಲಾ ಬೌಲರ್‌ಗಳು ದುಬಾರಿ ಎನಿಸಿದರು.

ಮಳೆ ಅಡಚಣೆ ಕಾರಣ ಓವರ್‌ಗಳನ್ನು ಕಡಿತ ಮಾಡಿದ್ದರಿಂದ ಈ ಪಂದ್ಯದಲ್ಲಿ ಕುಕ್ ಆಡದೇ ಇರಲು ನಿರ್ಧರಿಸಿದ್ದರು. ಕಾರಣ ಕುಕ್ ಚುಟುಕು ಕ್ರಿಕೆಟ್‌ನಲ್ಲಿ ಹೆಚ್ಚು ಆಡಿಲ್ಲ. ಆದರೆ ಬದಲಿ ವ್ಯವಸ್ಥೆ ಇಲ್ಲದ ಕಾರಣ ಕಣಕ್ಕಿಳಿದಿದ್ದರು.

ಸ್ಕೋರು ವಿವರ
ಭಾರತ: 23 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 187
ಪಾರ್ಥಿವ್ ಪಟೇಲ್ ಸಿ ಕ್ರೇಗ್ ಕೀಸ್‌ವೆಟರ್ ಬಿ ಜೇಮ್ಸ ಆ್ಯಂಡರ್ಸನ್ 28
ಆಜಿಂಕ್ಯಾ ರಹಾನೆ ಸಿ ಅಂಡ್ ಬಿ ಗ್ರೇಮ್ ಸ್ವಾನ್ 54
ರಾಹುಲ್ ದ್ರಾವಿಡ್ ಸಿ ಜೇಮ್ಸ ಆ್ಯಂಡರ್ಸನ್ ಬಿ ಗ್ರೇಮ್ ಸ್ವಾನ್ 32
ವಿರಾಟ್ ಕೊಹ್ಲಿ ಸಿ ಇಯಾನ್ ಬೆಲ್ ಬಿ ಗ್ರೇಮ್ ಸ್ವಾನ್ 09
ಸುರೇಶ್ ರೈನಾ ಸಿ ಬೆನ್ ಸ್ಟೋಕ್ಸ್ ಬಿ ಟಿಮ್ ಬ್ರೆಸ್ನನ್ 40
ಎಂ.ಎಸ್.ದೋನಿ ಸಿ ಇಯಾನ್ ಬೆಲ್ ಬಿ ಟಿಮ್ ಬ್ರೆಸ್ನನ್ 06
ಮನೋಜ್ ತಿವಾರಿ ಸಿ ಇಯಾನ್ ಬೆಲ್ ಬಿ ಟಿಮ್ ಬ್ರೆಸ್ನನ್ 11
ಆರ್.ಅಶ್ವಿನ್ ರನ್‌ಔಟ್ (ಕೀಸ್‌ವೆಟರ್) 01
ಪ್ರವೀಣ್ ಕುಮಾರ್ ಔಟಾಗದೆ 00
ಇತರೆ (ಲೆಗ್‌ಬೈ-2, ವೈಡ್-4) 06
ವಿಕೆಟ್ ಪತನ: 1-30 (ಪಾರ್ಥಿವ್; 3.2); 2-109 (ದ್ರಾವಿಡ್; 14.2); 3-125 (ಕೊಹ್ಲಿ; 16.6); 4-143 (ರಹಾನೆ; 18.5); 5-164 (ದೋನಿ; 20.3); 6-182 (ರೈನಾ; 22.1); 7-186 (ತಿವಾರಿ; 22.4); 8-187 (ಅಶ್ವಿನ್; 22.6).
ಬೌಲಿಂಗ್: ಟಿಮ್ ಬ್ರೆಸ್ನನ್ 4-0-43-3 (ವೈಡ್-1), ಜೇಮ್ಸ ಆ್ಯಂಡರ್ಸನ್ 3-0-11-1 (ವೈಡ್-1), ಸ್ಟುವರ್ಟ್ ಬ್ರಾಡ್ 3-0-25-0 (ವೈಡ್-1), ಜೇಡ್ ಡರ್ನ್‌ಬಾಕ್ 5-0-49-0 (ವೈಡ್-1), ರವಿ ಬೋಪಾರ 2-0-13-0, ಗ್ರೇಮ್ ಸ್ವಾನ್ 5-0-33-3, ಸಮಿತ್ ಪಟೇಲ್ 1-0-11-0

ಇಂಗ್ಲೆಂಡ್: 22.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 188
ಅಲಸ್ಟರ್ ಕುಕ್ ಔಟಾಗದೆ 80
ಕ್ರೇಗ್ ಕೀಸ್‌ವೆಟರ್ ಎಲ್‌ಬಿಡಬ್ಲ್ಯು ಬಿ ಆರ್.ವಿನಯ್ ಕುಮಾರ್ 46
ಇಯಾನ್ ಬೆಲ್ ಸಿ ವಿರಾಟ್ ಕೊಹ್ಲಿ ಬಿ ಆರ್.ಅಶ್ವಿನ್ 25
ರವಿ ಬೋಪಾರ ಸಿ ವಿರಾಟ್ ಕೊಹ್ಲಿ ಬಿ ಆರ್.ಅಶ್ವಿನ್ 24
ಸಮಿತ್ ಪಟೇಲ್ ಔಟಾಗದೆ 09
ಇತರೆ (ಲೆಗ್‌ಬೈ-2, ವೈಡ್-2) 04
ವಿಕೆಟ್ ಪತನ: 1-67 (ಕೀಸ್‌ವೆಟರ್; 6.2); 2-105 (ಬೆಲ್; 10.4); 3-165 (ಬೋಪಾರ; 18.4).
ಬೌಲಿಂಗ್: ಪ್ರವೀಣ್ ಕುಮಾರ್ 4-0-41-0, ಆರ್.ವಿನಯ್ ಕುಮಾರ್ 4.1-0-33-1 (ವೈಡ್-1), ಆರ್.ಅಶ್ವಿನ್ 5-0-42-2 (ವೈಡ್-1), ಮುನಾಫ್ ಪಟೇಲ್ 5-0-35-0, ವಿರಾಟ್ ಕೊಹ್ಲಿ 3-0-22-0, ಸುರೇಶ್ ರೈನಾ 1-0-13-0
ಫಲಿತಾಂಶ: ಇಂಗ್ಲೆಂಡ್‌ಗೆ ಏಳು ವಿಕೆಟ್ ಜಯ ಹಾಗೂ ಸರಣಿಯಲ್ಲಿ 1-0 ಮುನ್ನಡೆ. ಪಂದ್ಯ ಶ್ರೇಷ್ಠ: ಅಲಸ್ಟರ್ ಕುಕ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.