ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ರಣಜಿ ಆಡಲಿರುವ ದ್ರಾವಿಡ್

Last Updated 22 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಹುಲ್ ದ್ರಾವಿಡ್ 2011-2012ರ ರಣಜಿ ಟ್ರೋಫಿ  ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. ಕಾರಣ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಗುರುವಾರ ಪ್ರಕಟಿಸಿರುವ 35 ಆಟಗಾರರ ಪಟ್ಟಿಯಲ್ಲಿ ದ್ರಾವಿಡ್ ಹೆಸರೂ ಇದೆ.

ರಣಜಿ ಕ್ರಿಕೆಟ್ ನವೆಂಬರ್ 3ರಂದು ಶುರುವಾಗಲಿದೆ. ಕಳೆದ ಬಾರಿ ಸೆಮಿಫೈನಲ್ ತಲುಪಿದ್ದ ಕರ್ನಾಟಕ ತಂಡ ಈ ಬಾರಿ ಎಲೈಟ್ `ಎ~ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಇದೇ ಗುಂಪಿನಲ್ಲಿ ಕಳೆದ ಬಾರಿಯ ಚಾಂಪಿಯನ್ ರಾಜಸ್ತಾನ, ಮುಂಬೈ, ರೈಲ್ವೇಸ್, ಉತ್ತರ ಪ್ರದೇಶ, ಪಂಜಾಬ್, ಸೌರಾಷ್ಟ್ರ ಹಾಗೂ ಒಡಿಸ್ಸಾ ತಂಡಗಳಿವೆ. ಪ್ರತಿ ತಂಡಗಳು ತಲಾ ಏಳು ಲೀಗ್ ಪಂದ್ಯ ಆಡಲಿವೆ. ಕರ್ನಾಟಕ ಈ ಬಾರಿ ತವರಿನಲ್ಲಿ ಮೂರು ಹಾಗೂ ಹೊರರಾಜ್ಯದಲ್ಲಿ ನಾಲ್ಕು ಪಂದ್ಯ ಆಡಲಿದೆ. ಹೈದರಾಬಾದ್ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಕವಾಗಿರುವ ಎಡಗೈ ಸ್ಪಿನ್ನರ್ ಸುನಿಲ್ ಜೋಶಿ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ.

ಕರ್ನಾಟಕ ಸಂಭಾವ್ಯ ತಂಡ ಇಂತಿದೆ: ರಾಹುಲ್ ದ್ರಾವಿಡ್, ಆರ್.ವಿನಯ್ ಕುಮಾರ್, ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ಭರತ್ ಚಿಪ್ಲಿ, ಗಣೇಶ್ ಸತೀಶ್, ಅಭಿಮನ್ಯು ಮಿಥುನ್, ಸಿ.ಎಂ.ಗೌತಮ್ (ವಿಕೆಟ್ ಕೀಪರ್), ಅಮಿತ್ ವರ್ಮ, ಸ್ಟುವರ್ಟ್ ಬಿನ್ನಿ, ಕೆ.ಬಿ.ಪವನ್, ಕೆ.ಎಲ್.ರಾಹುಲ್, ಎಸ್.ಅರವಿಂದ್, ಕುನಾಲ್ ಕಪೂರ್, ಸುನಿಲ್ ಎನ್.ರಾಜು, ಎಸ್.ಎಲ್.ಅಕ್ಷಯ್, ಎನ್.ಸಿ.ಅಯ್ಯಪ್ಪ, ಕೆ.ಪಿ.ಅಪ್ಪಣ್ಣ, ಕೆ.ಗೌತಮ್, ಎಸ್.ಕೆ.ಮೊಯಿನುದ್ದೀನ್, ರೋನಿತ್ ಮೋರೆ, ಕರುಣ್ ನಾಯರ್, ಆದಿತ್ಯ ಬಿ.ಸಾಗರ್, ಅಸ್ಗರ್ ಪಾಷಾ, ರಾಜೂ ಆರ್.ಭಟ್ಕಳ್, ಶ್ರೇಯಸ್ ಗೋಪಾಲ್, ರ‌್ಯಾನ್ ನಿನಾನ್, ಎಚ್.ಎಸ್.ಶರತ್, ಜೆ.ಸುಚಿತ್, ಅನಿರುದ್ಧ ಜೋಶಿ, ಎನ್.ವಿನೂ ಪ್ರಸಾದ್, ಬಿ.ಎನ್.ಭರತ್, ಕೆ.ಸಿ.ಅವಿನಾಶ್ (ವಿಕೆಟ್ ಕೀಪರ್), ಅಬ್ರಾರ್ ಕಾಜಿ ಹಾಗೂ ಮಯಾಂಕ್ ಅಗರ್‌ವಾಲ್.

ಕೋಚ್: ಕೆ.ಜಸ್ವಂತ್. ಸಹಾಯಕ ಕೋಚ್: ಸೋಮಶೇಖರ ಶಿರಗುಪ್ಪಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT