ಪಳ್ಳೆಕೆಲೆ (ಪಿಟಿಐ): ಐದನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 20 ರನ್ಗಳಿಂದ ಮಣಿಸಿದ ಭಾರತ ಸರಣಿಯನ್ನು 4-1 ರಲ್ಲಿ ಗೆದ್ದುಕೊಂಡಿತು.

ಪಳ್ಳೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಹೇಂದ್ರ ಸಿಂಗ್ ದೋನಿ ಬಳಗ 50 ಓವರ್ಗಳಲ್ಲಿ 7 ವಿಕೆಟ್ಗೆ 294 ರನ್ ಪೇರಿಸಿದರೆ, ಲಂಕಾ 45.4 ಓವರ್ಗಳಲ್ಲಿ 274 ರನ್ಗಳಿಗೆ ಆಲೌಟಾಯಿತು.

ಇರ್ಫಾನ್ ಪಠಾಣ್ (61ಕ್ಕೆ 5) ಎದುರಾಳಿ ತಂಡದ ಪತನಕ್ಕೆ ಕಾರಣರಾದರು. ಲಾಹಿರು ತಿರಿಮನ್ನೆ (77) ಮತ್ತು ಜೀವನ್ ಮೆಂಡಿಸ್ (72) ಅವರು ನಡೆಸಿದ ಹೋರಾಟಕ್ಕೆ ತಕ್ಕ ಫಲ ಲಭಿಸಲಿಲ್ಲ. ಸರಣಿ ಜಯಿಸಿದ ಕಾರಣ ಭಾರತ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ಮೊದಲು ಬ್ಯಾಟ್ ಮಾಡಿದ ಭಾರತ ಸವಾಲಿನ ಮೊತ್ತ ಪೇರಿಸಿತು. ಗೌತಮ್ ಗಂಭೀರ್ (88, 99 ಎಸೆತ, 7 ಬೌಂ), ಮನೋಜ್ ತಿವಾರಿ (65, 68 ಎಸೆತ, 6 ಬೌಂ) ಮತ್ತು ಮಹೇಂದ್ರ ಸಿಂಗ್ ದೋನಿ (58, 38 ಎಸೆತ, 8 ಬೌಂ, 1 ಸಿಕ್ಸರ್) ಅರ್ಧಶತಕ ಗಳಿಸಿ ತಂಡದ ಮೊತ್ತ ಹಿಗ್ಗಿಸಿದರು.

ಗಂಭೀರ್ ಮತ್ತು ತಿವಾರಿ ನಾಲ್ಕನೇ ವಿಕೆಟ್ಗೆ 110 ರನ್ ಸೇರಿಸಿದರೆ, ದೋನಿ ಹಾಗೂ ಪಠಾಣ್ ಏಳನೇ ವಿಕೆಟ್ಗೆ 9.5 ಓವರ್ಗಳಲ್ಲಿ 77 ರನ್ ಕಲೆಹಾಕಿದರು. ಅಜೇಯ 29 ರನ್ ಗಳಿಸಿದ ಪಠಾಣ್ ಆಲ್ರೌಂಡ್ ಪ್ರದರ್ಶನ ನೀಡಿದರು.

ಸ್ಕೋರ್ ವಿವರ:
ಭಾರತ: 50 ಓವರ್ಗಳಲ್ಲಿ 7 ವಿಕೆಟ್ಗೆ 294
ಗೌತಮ್ ಗಂಭೀರ್ ಸಿ ಮಾಲಿಂಗ ಬಿ ಸಚಿತ್ರ ಸೇನನಾಯಕೆ 88
ಅಜಿಂಕ್ಯ ರಹಾನೆ ಎಲ್ಬಿಡಬ್ಲ್ಯು ಬಿ ತಿಸಾರ ಪೆರೇರಾ 09
ವಿರಾಟ್ ಕೊಹ್ಲಿ ಎಲ್ಬಿಡಬ್ಲ್ಯು ಬಿ ನುವಾನ್ ಪ್ರದೀಪ್ 23
ರೋಹಿತ್ ಶರ್ಮ ಬಿ ನುವಾನ್ ಪ್ರದೀಪ್ 04
ಮನೋಜ್ ತಿವಾರಿ ಪೆರೇರಾ ಬಿ ಲಸಿತ್ ಮಾಲಿಂಗ 65
ಸುರೇಶ್ ರೈನಾ ಸಿ ತಿರಿಮನ್ನೆ ಬಿ ಲಸಿತ್ ಮಾಲಿಂಗ 00
ಮಹೇಂದ್ರ ಸಿಂಗ್ ದೋನಿ ಸಿ ಚಂಡಿಮಾಲ ಬಿ ಲಸಿತ್ ಮಾಲಿಂಗ 58
ಇರ್ಫಾನ್ ಪಠಾಣ್ ಔಟಾಗದೆ 29
ಆರ್. ಅಶ್ವಿನ್ ಔಟಾಗದೆ 02
ಇತರೆ: (ಲೆಗ್ಬೈ-10, ವೈಡ್-6) 16

ವಿಕೆಟ್ ಪತನ: 1-29 (ರಹಾನೆ; 5.1), 2-77 (ಕೊಹ್ಲಿ; 14.3), 3-47 (ರೋಹಿತ್; 16.6), 4-197 (ತಿವಾರಿ; 37.1), 5-197 (ರೈನಾ; 37.2), 6-213 (ಗಂಭೀರ್; 38.6), 7-290 (ದೋನಿ; 48.5)
ಬೌಲಿಂಗ್: ಲಸಿತ್ ಮಾಲಿಂಗ 10-0-64-3, ತಿಸಾರ ಪೆರೇರಾ 10-0-53-1, ಏಂಜೆಲೊ ಮ್ಯಾಥ್ಯೂಸ್ 5-0-29-0, ನುವಾನ್ ಪ್ರದೀಪ್ 10-0-63-2, ಸಚಿತ್ರ ಸೇನನಾಯಕೆ 10-0-50-1, ಜೀವನ್ ಮೆಂಡಿಸ್ 5-0-25-0
ಶ್ರೀಲಂಕಾ: 45.4 ಓವರ್ಗಳಲ್ಲಿ 274
ಉಪುಲ್ ತರಂಗ ಸಿ ರಹಾನೆ ಬಿ ಇರ್ಫಾನ್ ಪಠಾಣ್ 31
ತಿಲಕರತ್ನೆ ದಿಲ್ಶಾನ್ ಸಿ ಜಹೀರ್ ಬಿ ಇರ್ಫಾನ್ ಪಠಾಣ್ 00
ಲಾಹಿರು ತಿರಿಮನ್ನೆ ರನೌಟ್ 77
ದಿನೇಶ್ ಚಂಡಿಮಾಲ ಎಲ್ಬಿಡಬ್ಲ್ಯು ಬಿ ಅಶೋಕ್ ದಿಂಡಾ 08
ಏಂಜೆಲೊ ಮ್ಯಾಥ್ಯೂಸ್ ರನೌಟ್ 13
ಚಾಮರ ಕಪುಗೆಡರ ಎಲ್ಬಿಡಬ್ಲ್ಯು ಬಿ ಜಹೀರ್ ಖಾನ್ 09
ಜೀವನ್ ಮೆಂಡಿಸ್ ಸಿ ದೋನಿ ಬಿ ಇರ್ಫಾನ್ ಪಠಾಣ್ 72
ತಿಸಾರ ಪೆರೇರಾ ಸಿ ಕೊಹ್ಲಿ ಬಿ ಇರ್ಫಾನ್ ಪಠಾಣ್ 18
ಸಚಿತ್ರ ಸೇನನಾಯಕೆ ಬಿ ಇರ್ಫಾನ್ ಪಠಾಣ್ 07
ಲಸಿತ್ ಮಾಲಿಂಗ ಸಿ ರೈನಾ ಅಶೋಕ್ ದಿಂಡಾ 10
ನುವಾನ್ ಪ್ರದೀಪ್ ಔಟಾಗದೆ 00
ಇತರೆ: (ಬೈ-2, ಲೆಗ್ಬೈ-14, ವೈಡ್-13) 29
ವಿಕೆಟ್ ಪತನ: 1-13 (ದಿಲ್ಶಾನ್; 1.3), 2-61 (ತರಂಗ; 7.5), 3-74 (ಚಂಡಿಮಾಲ; 10.1), 4-89 (ಮ್ಯಾಥ್ಯೂಸ್; 13.2), 5-102 (ಕಪುಗೆಡರ; 15.1), 6-204 (ತಿರಿಮನ್ನೆ; 35.5), 7-252 (ಪೆರೇರಾ; 42.3), 8-256 (ಮೆಂಡಿಸ್; 42.6), 9-266 (ಸೇನನಾಯಕೆ; 44.6), 10-274 (ಮಾಲಿಂಗ; 45.4)
ಬೌಲಿಂಗ್: ಜಹೀರ್ ಖಾನ್ 9-1-53-1, ಇರ್ಫಾನ್ ಪಠಾಣ್ 10-0-61-5, ಅಶೋಕ್ ದಿಂಡಾ 7.4-0-55-2, ವಿರಾಟ್ ಕೊಹ್ಲಿ 1-0-3-0, ಆರ್. ಅಶ್ವಿನ್ 9-0-37-0, ರೋಹಿತ್ ಶರ್ಮ 6-0-23-0, ಸುರೇಶ್ ರೈನಾ 2-0-12-0, ಮನೋಜ್ ತಿವಾರಿ 1-0-14-0
ಫಲಿತಾಂಶ: ಭಾರತಕ್ಕೆ 20 ರನ್ ಜಯ; 4-1 ರಲ್ಲಿ ಸರಣಿ ಗೆಲುವು, ಪಂದ್ಯಶ್ರೇಷ್ಠ: ಇರ್ಫಾನ್ ಪಠಾಣ್; ಸರಣಿ ಶ್ರೇಷ್ಠ: ವಿರಾಟ್ ಕೊಹ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.