ಜೋಹಾನ್ಸ್ಬರ್ಗ್ (ಪಿಟಿಐ): ಭಾರತದ ಸೋಮ್ದೇವ್ ದೇವವರ್ಮನ್ ಅವರು ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕ ಎಟಿಪಿ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಫೈನಲ್ಗೆ ಪ್ರವೇಶಿಸಿದ್ದಾರೆ. ಇದೇ ಮೊದಲ ಬಾರಿಗೆ ಫೈನಲ್ಗೆ ಪ್ರವೇಶಿಸಿರುವ ಸೋಮ್ ಭಾನುವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ 6-2, 6-4ರಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಆತಿಥೇಯ ದಕ್ಷಿಣ ಆಫ್ರಿಕದ ಇಜಾಕ್ ವಾನ್ ದೇರ್ ಮಾರ್ವೆ ಅವರನ್ನು ಮಣಿಸಿದರು.
ಕಳೆದ ವರ್ಷದ ಇದೇ ಟೂರ್ನಿಯಲ್ಲಿ ಸೋಮ್ದೇವ್ ಕ್ವಾರ್ಟರ್ಫೈನಲ್ ಹಂತದಲ್ಲಿ ನಿರ್ಗಮಿಸಿದ್ದರು. ಆದರೆ ಈ ಸಲ ಫೈನಲ್ ಹಂತಕ್ಕೆ ಪ್ರವೇಶಿಸಿರುವುದರಿಂದ ಪ್ರಶಸ್ತಿ ಗೆಲುವಿನ ಆಸೆ ಚಿಗುರಿಸಿದ್ದಾರೆ. ‘ಈ ಗೆಲುವು ನನ್ನ ಸಂತಸವನ್ನು ಇಮ್ಮಡಿಸಿದೆ. ಕಳೆದ ಸಲ ಎಂಟರ ಘಟ್ಟದಲ್ಲಿ ಸೋಲು ಅನುಭವಿಸಿದ್ದೆ.
ಈ ಸಲ ಪ್ರಶಸ್ತಿ ಗೆಲ್ಲಬೇಕು ಎನ್ನುವ ಕನಸು ನನಸಾಗುವ ಹಾದಿಯಲ್ಲಿದೆ ಎಂದು ಸೋಮ್ ಹೇಳಿದರು. ಕೇವಲ 39 ನಿಮಿಷಗಳಲ್ಲಿ ಕೊನೆಗೊಂಡ ಪಂದ್ಯದಲ್ಲಿ ಸೋಮ್ ಎರಡನೇ ಸೆಟ್ನಲ್ಲಿ ಮಾತ್ರ ಎದುರಾಳಿ ಆಟಗಾರನಿಂದ ಕೊಂಚ ಪ್ರತಿರೋಧ ಎದುರಿಸಬೇಕಾಯಿತು. ಮೊದಲ ಸೆಟ್ನಲ್ಲಿ ಸುಲಭ ಗೆಲುವನ್ನು ತಮ್ಮದಾಗಿ ಸಿಕೊಂಡರು.