ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡಕ್ಕೆ ಸಮಗ್ರ ಪ್ರಶಸ್ತಿ

ಪಿಯುಸಿ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌
Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಧಾರವಾಡ: ಅಂತಿಮ ದಿನವೂ ಟ್ರ್ಯಾಕ್‌ ಮತ್ತು ಫೀಲ್ಡ್‌ನಲ್ಲಿ ಮಿಂಚು ಹರಿಸಿದ ದಕ್ಷಿಣ ಕನ್ನಡ ಜಿಲ್ಲಾ ಅಥ್ಲೀಟ್‌ಗಳು 23 ಚಿನ್ನದೊಂದಿಗೆ ಒಟ್ಟು 63 ಪದಕಗಳನ್ನು ಬಾಚಿಕೊಂಡು ಪಿಯುಸಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅಥ್ಲೆಟಿಕ್‌ ಕೂಟದ ಸಮಗ್ರ ಚಾಂಪಿಯನ್‌ ಪಟ್ಟವನ್ನು ಮುಡಿಗೇರಿಸಿಕೊಂಡರು.

ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಕ್ರೀಡಾಂಗಣದಲ್ಲಿ ಬುಧವಾರ ಮುಕ್ತಾಯಗೊಂಡ ಕೂಟದಲ್ಲಿ ಈ ತಂಡದವರು 22 ಬೆಳ್ಳಿ ಮತ್ತು 8 ಕಂಚಿನ ಪದಕಗಳನ್ನು ಗೆದ್ದುಕೊಂಡರು. 8 ಚಿನ್ನ, 6 ಬೆಳ್ಳಿ ಮತ್ತು 4 ಕಂಚು ಗೆದ್ದ ಮೈಸೂರು ಜಿಲ್ಲಾ ತಂಡ ದ್ವಿತೀಯ ಸ್ಥಾನವನ್ನು ಗೆದ್ದುಕೊಂಡಿತು. ಬೆಂಗಳೂರು ಉತ್ತರ ಜಿಲ್ಲಾ ತಂಡ ನಾಲ್ಕು ಚಿನ್ನ ಮತ್ತು 2 ಕಂಚು ಗೆದ್ದುಕೊಂಡು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಕೊನೆಯ ದಿನದ ಫಲಿತಾಂಶಗಳು
ಬಾಲಕರ ವಿಭಾಗ

400 ಮೀಟರ್ಸ್‌ ಓಟ: ಭರತ್‌ ಎಲ್‌ (ಬೆಂಗಳೂರು ಉತ್ತರ)–1, ಶರತ್‌ ನಾಯ್ಕ್‌–2, ಅನುಷ್‌–3 (ಇಬ್ಬರೂ ದಕ). ಸಮಯ 50:93 ಸೆ; 1500 ಮೀಟರ್ಸ್ ಓಟ: ನವೀನ್‌ ಗೌಡ (ದಕ)–1, ಶ್ಯಾಮ್‌ ಎಂ.ಕೆ (ಹಾಸನ)–2, ಐ.ಎಚ್‌.ನಾಗರಾಜ್‌ (ವಿಜಾಪುರ)–3. ಸಮಯ 4:27.96 ಸೆ; 110 ಮೀಟರ್ಸ್‌ ಹರ್ಡಲ್ಸ್‌: ಸಂತೋಷ (ದಕ)–1, ಸಂದೀಪ್‌ ಕುಮಾರ್‌ (ಬೆಂಗಳೂರು ದಕ್ಷಿಣ)–2, ಧನಂಜಯ (ದಕ)–3. ಸಮಯ 15:41 ಸೆ; 4X100 ಮೀಟರ್ಸ್‌ ರಿಲೇ: ದಕ್ಷಿಣ ಕನ್ನಡ–1, ಧಾರವಾಡ–2, ಬೆಂಗಳೂರು ದಕ್ಷಿಣ–3; ಪೋಲ್‌ ವಾಲ್ಟ್‌: ಶ್ರವಣ ಕುಮಾರ್‌ ಎಸ್‌.ಬಿ (ದಕ)–1, ಮುಕುಂದ ದೇವಾಡಿಗ (ಉತ್ತರ ಕನ್ನಡ)–2, ಪರಶುರಾಮ್‌ ಬಳ್ಳಾರಿ (ಬಳ್ಳಾರಿ)–3. ಎತ್ತರ 3.60 ಮೀ; ಹ್ಯಾಮರ್‌ ಥ್ರೋ: ಗವಿ ಸ್ವಾಮಿ–1, ಸಿದ್ಧಾರ್ಥ ಪುತ್ರನ್‌–2 (ಇಬ್ಬರೂ ದಕ), ಸುದರ್ಶನ್‌ (ಉಡುಪಿ)–3. ದೂರ 68.12 ಮೀ; ಗುಡ್ಡಗಾಡು ಓಟ: ವಿನಾಯಕ ಗೋಧಿ (ದಕ)–1, ಯಲ್ಲಪ್ಪ ಬೆಳ್ಳಿಕುಂಪಿ (ಧಾರವಾಡ)–2, ತ್ರಿಶೂಲ್‌ ಎಚ್‌.ಎನ್‌ (ದಕ)–3. ಸಮಯ 18:58.61 ಸೆ.

ಬಾಲಕಿಯರ ವಿಭಾಗ
400 ಮೀಟರ್ಸ್‌ ಓಟ:
ವಿಜಯಕುಮಾರಿ ಜಿ.ಬಿ (ಬೆಂಗಳೂರು ಉತ್ತರ)–1, ನವಮಿ ಎಚ್‌.ಆರ್‌ –2, ಲಿಖಿತಾ ಎಂ–3 (ಇಬ್ಬರೂ ಮೈಸೂರು). ಸಮಯ 1:01.30 ಸೆ; 1500 ಮೀಟರ್ಸ್ ಓಟ: ಪೂರ್ಣಿಮಾ ಸಿ (ಮೈಸೂರು)–1, ಎ.ಎ.ಲಖಿತಾ (ದಕ)–2, ಮಂಜುಳಾ ಎಂ (ಮೈಸೂರು)–3. 5:22.01ಸೆ; 100 ಮೀಟರ್ಸ್‌ ಹರ್ಡಲ್ಸ್‌: ಹರ್ಷಿತಾ ಪಿ (ಮೈಸೂರು)–1, ಪುಷ್ಪಾಂಜಲಿ (ಧಾರವಾಡ)–2, ಅಲ್ವಿನಾ (ಉಡುಪಿ)–3. ಸಮಯ 15:97 ಸೆ; 4X100 ಮೀಟರ್ಸ್‌ ರಿಲೇ: ದಕ್ಷಿಣ ಕನ್ನಡ–1, ಮೈಸೂರು–2, ಬೆಳಗಾವಿ–3; ಪೋಲ್‌ ವಾಲ್ಟ್‌: ಪವಿತ್ರಾ–1, ಜಯಶ್ರೀ ಎನ್‌–2  (ಇಬ್ಬರೂ ದಕ), ವಿದ್ಯಾ (ಉಡುಪಿ)–3; ದೂರ 2.60 ಮೀ; ಹ್ಯಾಮರ್‌ ಥ್ರೋ: ಹರ್ಷಿತಾ ಡಬ್ಲ್ಯು.ಆರ್‌ (ಮೈಸೂರು)–1, ರಮ್ಯಾ ಎಚ್.ಸಿ (ದಕ)–2, ಸಹನಾ ವೈ (ಚಿಕ್ಕಮಗಳೂರು)–3. ದೂರ 34.24 ಮೀ; ಜಾವೆಲಿನ್‌ ಥ್ರೋ: ಹರ್ಷಿತಾ (ಮೈಸೂರು)–1, ಚೇತನಾ ಎ.ಡಿ (ದಕ)–2, ಛಾಯಾ ಎಲ್‌ (ಬೆಂಗಳೂರು ದಕ್ಷಿಣ)–3. ದೂರ 33.02 ಮೀ; ಗುಡ್ಡಗಾಡು ಓಟ: ಎ.ಎ ಲಖಿತಾ–1, ಸೌಮ್ಯಾ ಕೆ–2 (ಇಬ್ಬರೂ ದಕ), ಬಿಂದು (ತುಮಕೂರು)–3. ಸಮಯ 10:59.62 ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT