ಕೋಲ್ಕತ್ತ (ಪಿಟಿಐ): ಭಾರತದ ದೀಪಿಕಾ ಕುಮಾರಿ ಕೊಲಂಬಿಯದ ಮೆಡೆಲಿನ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಆರ್ಚರಿ `ಸ್ಟೇಜ್-3' ಟೂರ್ನಿಯ ಕ್ವಾರ್ಟರ್ ಫೈನಲ್ನಲ್ಲಿ ಸೋಲು ಅನುಭವಿಸಿದರು.
ಮಹಿಳೆಯರ ರಿಕರ್ವ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಅಮೆರಿಕದ ಮಿರಾಂಡಾ ಲೀಕ್ 6-2 ರಲ್ಲಿ ದೀಪಿಕಾ ಅವರನ್ನು ಮಣಿಸಿದರು. ಮಿರಾಂಡಾ ಆ ಬಳಿಕ 6-5 ರಲ್ಲಿ ಚೀನಾದ ಯುವಾನ್ ಸಿ ವಿರುದ್ಧ ಗೆಲುವು ಪಡೆದು ಫೈನಲ್ಗೆ ಮುನ್ನಡೆದರು.
ಏಳನೇ ಶ್ರೇಯಾಂಕ ಹೊಂದಿದ್ದ ದೀಪಿಕಾ ಮೊದಲ ಪಂದ್ಯದಲ್ಲಿ ಗ್ವಾಟೆಮಾಲಾದ ರೆಗಿನಾ ಮರಿಯಾ ರೊಮೆರೊ ವಿರುದ್ಧ 6-0 ರಲ್ಲಿ ಗೆಲುವು ಪಡೆದಿದ್ದರೆ, ಎರಡನೇ ಪಂದ್ಯದಲ್ಲಿ 6-4 ರಲ್ಲಿ ಡೆನ್ಮಾರ್ಕ್ನ ಕರೀನಾ ಕ್ರಿಸ್ಟಿಯಾನ್ಸೆನ್ ಅವರನ್ನು ಸೋಲಿಸಿದ್ದರು.
ಭಾರತದ ಇತರ ಸ್ಪರ್ಧಿಗಳು ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಹಂತದಲ್ಲೇ ನಿರಾಸೆ ಎದುರಿಸಿದರು. ಎಂಟನೇ ಶ್ರೇಯಾಂಕ ಹೊಂದಿದ್ದ ಲೈಶ್ರಾಮ್ ಬೊಂಬ್ಯಾಲ ದೇವಿ 2-6 ರಲ್ಲಿ ರಷ್ಯಾದ ಇನಾ ಸ್ಟೆಪನೋವಾ ಎದುರು ಪರಾಭವಗೊಂಡರು.
ಪುರುಷರ ರಿಕರ್ವ್ ವಿಭಾಗದಲ್ಲಿ ಅತಾನು ದಾಸ್ ಮತ್ತು ತರುಣ್ದೀಪ್ ರಾಯ್ ಹದಿನಾರರ ಘಟ್ಟದಲ್ಲಿ ಸೋಲು ಅನುಭವಿಸಿದರು. ಭಾರತ ಸ್ಪರ್ಧಿಗಳು ಇದೀಗ ತಂಡ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.