ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ದೋನಿ ಅಜೇಯ ದ್ವಿಶತಕ ಸಿಡಿಸಿದ್ದಾರೆ.
ಮೂರನೆ ದಿನದಾಟದ ಅಂತ್ಯಕ್ಕೆ ಭಾರತ 8 ವಿಕೆಟ್ ನಷ್ಟಕ್ಕೆ 516 ರನ್ಗಳಿಸಿದೆ. ಇದರೊಂದಿಗೆ ಭಾರತ 135 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ.
ಮೂರನೇ ದಿನದಾಟದ ಆರಂಭದಲ್ಲೇ ಸಚಿನ್ ಔಟಾದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಜೊತೆ ಸೇರಿದ ನಾಯಕ ದೋನಿ ಉತ್ತಮ ಜತೆಯಾಟವಾಡಿದರು. ಕೊಹ್ಲಿ ಕೂಡ ಶತಕ ಸಿಡಿಸುವ ಮೂಲಕ ಗಮನ ಸೆಳೆದರು. ಆಸ್ಟ್ರೇಲಿಯಾ ಬೌಲರ್ಗಳ ಬೆವರಿಳಿಸಿದ ಕೊಹ್ಲಿ ಮತ್ತು ದೋನಿ ತಂಡದ ಮೊತ್ತ 500 ರನ್ಗಳ ಗಡಿ ದಾಟಲು ನೆರವಾದರು.