ಶಾಂಘೈ: ರಫೆಲ್ ನಡಾಲ್ ಹಾಗೂ ಮರಿನ್ ಸಿಲಿಕ್ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಎದುರಾಗಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ನಡಾಲ್ 6–4, 6–7, 6–3ರಲ್ಲಿ ಗ್ರಿಗೊರ್ ದಿಮಿತ್ರೊವ್ ಅವರನ್ನು ಮಣಿಸಿದರು.
ನಡಾಲ್ ಇಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಈ ಋತುವಿನಲ್ಲಿ ಆರು ಟೂರ್ನಿಗಳಲ್ಲಿ ಚಾಂಪಿಯನ್ ಆಗಿರುವ ಅವರು ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಏಳನೇ ಪ್ರಶಸ್ತಿ ಮೇಲೆ ನಡಾಲ್ ಕಣ್ಣು ನೆಟ್ಟಿದ್ದಾರೆ. ಸತತವಾಗಿ ಅಮೆರಿಕ ಓಪನ್, ಚೀನಾ ಓಪನ್ ಗೆದ್ದುಕೊಂಡಿದ್ದಾರೆ.