ಲಂಡನ್ (ಪಿಟಿಐ): ಕೊರಿಯಾ ತಂಡವನ್ನು ಮಣಿಸಿ ಡೇವಿಸ್ ಕಪ್ ಟೂರ್ನಿಯಲ್ಲಿ ವಿಶ್ವ ಗುಂಪಿಗೆ ಪ್ರವೇಶಿಸಿರುವ ಭಾರತ ತಂಡಕ್ಕೆ ಈಗ ಕಠಿಣ ಸವಾಲು ಎದುರಾಗಿದೆ.
ಅನುಭವಿ ಮತ್ತು ಯುವ ಆಟಗಾರರನ್ನು ಹೊಂದಿರುವ ಭಾರತ ತಂಡ ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ ಟೆನಿಸ್ನ ಭದ್ರಕೋಟೆ ಎನಿಸಿರುವ ಸ್ಪೇನ್ ವಿರುದ್ಧ ಆಡಬೇಕಿದೆ.
ಚಂಡೀಗಡದಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಡೇವಿಸ್ ಕಪ್ನಲ್ಲಿ ಭಾರತ ತಂಡ 4–1ರಲ್ಲಿ ಕೊರಿಯಾವನ್ನು ಮಣಿಸಿತ್ತು. ಭಾರತ ಮತ್ತು ಸ್ಪೇನ್ ತಂಡಗಳು ಒಟ್ಟು ಮೂರು ಬಾರಿ ಮುಖಾಮುಖಿಯಾಗಿದ್ದು ಸ್ಪೇನ್ ಎರಡು ಸಲ ಜಯ ಪಡೆದಿದೆ. 1965ರಲ್ಲಿ ಕೊನೆಯ ಬಾರಿಗೆ ಈ ತಂಡಗಳು ಪೈಪೋಟಿ ನಡೆಸಿದ್ದವು.