ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ತಂಡಕ್ಕೆ ಸಹನಾ ನೇತೃತ್ವ

ಫೆಡರೇಷನ್‌ ಕಪ್‌ ಕ್ರೀಡಾಕೂಟಕ್ಕೆ ಇಂದು ಚಾಲನೆ; 876 ಕ್ರೀಡಾಪಟುಗಳು ಭಾಗಿ
Last Updated 29 ಏಪ್ರಿಲ್ 2015, 19:36 IST
ಅಕ್ಷರ ಗಾತ್ರ

ಮಂಗಳೂರು: ರಾಷ್ಟ್ರೀಯ ಫೆಡರೇಷನ್‌ ಕಪ್‌ ಅಥ್ಲೆಟಿಕ್‌ ಕ್ರೀಡಾಕೂಟದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳೂರಿನ ಮಂಗಳಾ ಕ್ರೀಡಾಂ ಗಣದಲ್ಲಿ ಗುರುವಾರ ಸಂಜೆ 5 ಗಂಟೆಗೆ ನಡೆಯುವ ಸಮಾರಂಭದಲ್ಲಿ 19ನೇ ಫೆಡರೇಷನ್‌ ಕಪ್‌ ಅಥ್ಲೆಟಿಕ್‌ ಕ್ರೀಡಾ ಕೂಟಕ್ಕೆ  ಚಾಲನೆ ದೊರೆಯಲಿದೆ.

ಇದಕ್ಕೂ ಮುನ್ನ ಕರಾವಳಿ ಭಾಗದ ಸಂಸ್ಕೃತಿ ಬಿಂಬಿಸುವ ಕಲಾ ಪ್ರಕಾರಗಳ ವೈವಿಧ್ಯಮಯ ಮೆರವಣಿಗೆ ಹಾಗೂ ಕ್ರೀಡಾಪಟುಗಳ ಪಥಸಂಚಲನ ನಡೆಯಲಿದೆ. ಕೂಟದಲ್ಲಿ ಭಾಗವಹಿಸುವ ಕರ್ನಾಟಕ ತಂಡವನ್ನು ಹೈಜಂಪ್‌ ಸ್ಪರ್ಧಿ ಒಲಿಂಪಿಯನ್‌ ಸಹನಾಕುಮಾರಿ ಮುನ್ನಡೆಸಲಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದ 22 ರಾಜ್ಯಗಳ ಹಾಗೂ ಎಂಟು ಕೇಂದ್ರ ಸೇವೆ ಗಳ 720, ವೈಯಕ್ತಿಕ 156 ಕ್ರೀಡಾಪಟು ಗಳು ಸೇರಿ ಒಟ್ಟು 876 ಕ್ರೀಡಾಪಟುಗಳು ಈ ಕೂಟದಲ್ಲಿ ಭಾಗವಹಿಸಲಿದ್ದಾರೆ. ಒಎನ್‌ಜಿಸಿ ತಂಡದಿಂದ ಅತಿ ಹೆಚ್ಚು ಅಂದರೆ 72  ಕ್ರೀಡಾಪಟುಗಳು ಪಾಲ್ಗೊ ಳ್ಳಲಿದ್ದರೆ,  ಕೇರಳದ 62, ಸೇನಾ ತಂಡದ 61, ಉತ್ತರ ಪ್ರದೇಶದ 58, ಕರ್ನಾ ಟಕದ 41, ಹಾಗೂ ಚಂಡೀಗಡದಿಂದ ಕೇವಲ ಇಬ್ಬರು ಕ್ರೀಡಾಪಟುಗಳು ಮಾತ್ರ ಭಾಗವಹಿತ್ತಿದ್ದಾರೆ. 

ಕ್ರೀಡಾಪಟುಗಳ ದಂಡು: ಕ್ರೀಡಾಕೂಟ ದಲ್ಲಿ ಪದಕದ ಬೇಟೆ ಆಡಲು  ಪ್ರಮುಖ ಕ್ರೀಡಾಪಟುಗಳ ದಂಡು ಮಂಗಳೂರಿಗೆ ಆಗಮಿಸಿದೆ. ಕಾಮನ್‌ವೆಲ್ತ್‌ ಕ್ರೀಡಾ ಕೂಟದ ಜಾವೆಲಿನ್‌ ಎಸೆತದಲ್ಲಿ ಪದಕ ಗೆದ್ದಿದ್ದ ಕಾಶಿನಾಥ್‌, ರಾಷ್ಟ್ರೀಯ ಕೂಟದ ಟ್ರಿಪಲ್‌ ಜಂಪ್‌ನಲ್ಲಿ ಪದಕ ಜಯಿಸಿರುವ  ಹರ್ಷದ್‌, ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ ಇಂದ್ರಜಿತ್‌ ಪಟೇಲ್‌, ಏಷ್ಯನ್‌ ಜೂನಿಯರ್‌ ವಿಭಾಗದಲ್ಲಿ ಪದಕ ಗೆದ್ದಿರುವ ಸುರೇಶ್‌ ಕುಮಾರ್‌, ಒಲಿಂಪಿ ಯನ್‌ ಓಟಗಾರ್ತಿ ಕರ್ನಾಟಕದ ಪೂವಮ್ಮ, ಹರ್ಡಲ್ಸ್‌ನ ಓಟಗಾರ್ತಿ ಮೇಘನಾ ಶೆಟ್ಟಿ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಕೂಟ ಗಳಲ್ಲಿ ಎತ್ತರದ ಸಾಧನೆ ಮಾಡಿರುವ ಅನೇಕ ಕ್ರೀಡಾಪಟುಗಳು ಬಂದಿದ್ದಾರೆ.

ಕ್ರೀಡಾಕೂಟದಲ್ಲಿ ಭಾಗವಹಿಸುವ 30 ತಂಡಗಳಲ್ಲಿ ಈಗಾಗಲೇ 10ಕ್ಕೂ ಹೆಚ್ಚು ತಂಡಗಳು ಆಗಮಿಸಿದ್ದು. ಉಳಿದ ತಂಡಗಳು ಗುರುವಾರ ಸಂಜೆ ವೇಳೆಗೆ ಮಂಗಳೂರಿಗೆ ಬಂದಿಳಿಯಲಿವೆ. ‘ಭಾರತೀಯ ಅಥ್ಲೆಟಿಕ್‌ ಫೆಡರೇಷ ನ್‌ನ 180 ತರಬೇತುದಾರರು, 140 ರಿಂದ  150 ಅಥ್ಲೀಟ್‌ಗಳು, ಪಟಿಯಾಲ, ಬೆಂಗಳೂರು ಹಾಗೂ ಪಿ.ಟಿ.ಉಷಾ ಅಥ್ಲೆಟಿಕ್‌ ಅಕಾಡೆಮಿಯ ಕ್ರೀಡಾಪಟು ಗಳು ಸೇರಿ 300ಕ್ಕೂ ಹೆಚ್ಚು ಕ್ರೀಡಾಪ ಟುಗಳು ಆಗಮಿಸಿದ್ದಾರೆ’ ಎಂದು  ಫೆಡರೇಷನ್  ಮಹಾಕಾರ್ಯದರ್ಶಿ ಸಿ.ಕೆ. ವಲ್ಸನ್‌ ತಿಳಿಸಿದರು.

‘ಕ್ರೀಡಾಕೂಟದಲ್ಲಿ ಭಾಗವಹಿಸುವ ಯುವ ಕ್ರೀಡಾಪಟುಗಳಲ್ಲಿ ಉದ್ದೀಪನ ಮದ್ದು ಸೇವನೆ ಪ್ರಕರಣಗಳು ಕಂಡು ಬರುತ್ತಿವೆ. ಅದಕ್ಕಾಗಿಯೇ ಶಿಬಿರ ನಡೆಸುವ ಸಂದರ್ಭದಲ್ಲಿ ಎಲ್ಲ ಕ್ರೀಡಾಪಟುಗಳಿಗೆ ಉದ್ದೀಪನ ಮದ್ದುಗಳ ಕುರಿತು ಜಾಗೃತಿ  ಮೂಡಿಸಲಾಗಿದೆ. ಕ್ರೀಡಾಕೂಟದ ಸಂದರ್ಭದಲ್ಲಿ ಯಾವ ಔಷಧಿ ಸೇವಿಸಬೇಕು. ಯಾವ ಔಷಧಿ ತೆಗೆದುಕೊಳ್ಳಬಾರದು ಎಂಬ ಮಾಹಿತಿಯನ್ನು ಅಖಿಲ ಭಾರತ ಅಥ್ಲೆಟಿಕ್‌ ಸಂಸ್ಥೆ ಮೂಲಕ ನೀಡಲಾಗಿದೆ’ ಎಂದು ತಿಳಿಸಿದರು.

ಸಮಯದಲ್ಲಿ ಬದಲಾವಣೆ: ‘ಕೆಲವು ಕ್ರೀಡಾ ಸ್ಪರ್ಧೆಗಳನ್ನು ಮಧ್ಯಾಹ್ನ 3 ಗಂಟೆಗೆ ಆರಂಭಿಸಲು ಉದ್ದೇಶಿಸ ಲಾಗಿತ್ತು, ಆದರೆ ಈ ಅವಧಿಯಲ್ಲಿ ಬಿಸಿಲು ಹೆಚ್ಚಿರುವುದರಿಂದ ಸಂಜೆ 4 ಗಂಟೆಯ ನಂತರ ಸ್ಪರ್ಧೆ ಆರಂಭಿಸಲು ಬುಧವಾರ ನಿರ್ಧರಿಸಲಾಗಿದೆ. ಮಧ್ಯಾಹ್ನ ನಡೆಯುವ ಕೆಲ ಕ್ರೀಡೆಗಳನ್ನು ಒಂದು ಗಂಟೆ ನಂತರ ನಡೆಸಲಾಗುತ್ತಿದೆ’ ಎಂದು ದ.ಕ. ಅಥ್ಲೆಟಿಕ್‌್ ಸಂಸ್ಥೆ ಅಧ್ಯಕ್ಷ ಮಂಜುನಾಥ್‌ ಭಂಡಾರಿ ತಿಳಿಸಿದ್ದಾರೆ.

ವೆಬ್‌ಸೈಟ್‌ಗೆ ಚಾಲನೆ: ಕರ್ನಾಟಕ ಅಥ್ಲೆಟಿಕ್‌ ಸಂಸ್ಥೆಯ ವೆಬ್‌ಸೈಟ್‌ಗೆ ಬುಧವಾರ ಚಾಲನೆ ನೀಡಲಾಗಿದ್ದು, ಕ್ರೀಡಾಕೂಟದ ಮಾಹಿತಿಗಾಗಿ www.kaa.org.in ಗೆ ಸಂಪರ್ಕಿಸಲು ರಾಜ್ಯ ಅಥ್ಲೆಟಿಕ್‌ ಸಂಸ್ಥೆ  ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT