ಮೈಸೂರು: ಹ್ಯಾಟ್ರಿಕ್ ಗೋಲು ಗಳಿಕೆಯ ಸಾಧನೆ ಮಾಡಿದ ಸದಾ ಸೆಂಗರ್ ನೆರವಿನಿಂದ ಛತ್ತೀಸಗಢ ತಂಡವು ಚಾಮುಂಡಿ ವಿಹಾರ ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ಹಾಕಿ ಟೂರ್ನಿಯ ಬಿ ಡಿವಿಷನ್ ಲೀಗ್ನಲ್ಲಿ ಗುರುವಾರ ಭರ್ಜರಿ ಜಯ ಗಳಿಸಿತು.

ಹಾಕಿ ಕರ್ನಾಟಕ ಆಯೋಜಿಸಿರುವ ಈ ಟೂರ್ನಿಯ ಲೀಗ್ ಹಂತದ ‘ಸಿ’ ಗುಂಪಿನ ಪಂದ್ಯದಲ್ಲಿ ಛತ್ತೀಸಗಢ ತಂಡವು 13-–0ಯಿಂದ ಗೋವನ್ಸ್ ಹಾಕಿ ತಂಡದ ವಿರುದ್ಧ ಭರ್ಜರಿ ಜಯ ಗಳಿಸಿತು.

ಇದಕ್ಕೆ ಕಾರಣವಾಗಿದ್ದು ಮುನ್ಪಡೆ ಆಟಗಾರ್ತಿ ಸದಾ ಸೆಂಗರ್. ಅವರು ಹ್ಯಾಟ್ರಿಕ್ ಸಹಿತ ಒಟ್ಟು 5 ಗೋಲುಗಳನ್ನು ಗಳಿಸಿದರು. 10ನೇ ನಿಮಿಷದಲ್ಲಿ ಗೋಲು ಗಳಿಸಿದ್ದ ಅವರು, ನಂತರ 44, 46, 48,ನೇ ನಿಮಿಷಗಳಲ್ಲಿ ಸತತ ಮೂರು ಬಾರಿ ಚೆಂಡನ್ನು ಗೋಲುಪೆಟ್ಟಿಗೆಗೆ ಕಳುಹಿಸಿದರು. 65ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿ ತಂಡದ ಗಳಿಕೆಯನ್ನು ಹಿಗ್ಗಿಸಿದರು.

ಪಂದ್ಯದ ಆರನೇ ನಿಮಿಷದಲ್ಲಿ ಮೊದಲ ಗೋಲು ಹೊಡೆದ ಉಪಾಸನಾ ಸಿಂಗ್ ಖಾತೆ ತೆರೆದರು. ಸಾಗರ ತಟದ ಗೋವಾ ರಾಜ್ಯದ ವನಿತೆಯರಿಗೆ ಹೆಚ್ಚು ಅವಕಾಶವನ್ನೇ ಕೊಡದೇ ಆಕ್ರಮಣ ಆಟಕ್ಕಿಳಿದ ಗುಡ್ಡಗಾಡಿನ ಛತ್ತೀಸಗಢದ ಆಟಗಾರ್ತಿಯರು ಪ್ರಾಬಲ್ಯ ಮೆರೆದರು.

ಕೆಲವು ಸಂದರ್ಭದಲ್ಲಿ ಚುರುಕುತನ ತೋರಿದ ಗೋವಾ ಗೋಲ್ಕೀಪರ್ ಚಿತ್ರಾ ನಾಯ್ಡು ಅವರನ್ನು ವಂಚಿಸುವಲ್ಲಿ ಛತ್ತೀಸಗಡ ಆಟಗಾರ್ತಿಯರು ಸಫಲರಾದರು. ಆಕಾಂಕ್ಷಾ ಪರಮಾರ್ (15, 17, 63ನಿ) ಮೂರು ಮತ್ತು ಸೀಮಾ ವರ್ಮಾ (34ನಿ), ನೀರಜ್ ರಾಣಾ (49ನಿ), ಕೃತಿಕಾಚಂದ್ರಾ (66ನಿ) ತಲಾ ಒಂದು ಗೋಲಿನ ಕಾಣಿಕೆ ನೀಡಿದರು.

ಈ ವಿಭಾಗದಲ್ಲಿ ಹಿಮಾಚಲ ಪ್ರದೇಶ ಮತ್ತು ಮಿಜೋರಾಮ್ ನಡುವೆ ನಡೆಯಬೇಕಿದ್ದ ಪಂದ್ಯವು ರದ್ದಾಯಿತು. ಎರಡು ತಂಡಗಳು ಬಂದಿಲ್ಲದ ಕಾರಣ ರದ್ದುಗೊಳಿಸಲಾಯಿತು.

ಮಣಿಪುರಕ್ಕೆ ಜಯ: ಮೊದಲ ದಿನವಾದ ಬುಧವಾರ 24 ಗೋಲು ಗಳಿಸಿ ಭರ್ಜರಿ ಆರಂಭ ಮಾಡಿದ್ದ ಮಣಿಪುರ ಎರಡನೇ ದಿನವೂ ಗೆಲುವಿನ ಓಟ ಮುಂದುವರೆಸಿತು. ಮಣಿಪುರ ತಂಡವು 2-–0ಯಿಂದ ಉತ್ತರಾಖಂಡದ ವಿರುದ್ಧ ಜಯಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.