ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ಎಸ್. ಚಿಕ್ಕರಂಗಪ್ಪ, ಶ್ರೀಧರ್ ಹಾಗೂ ಅಮಿತ್ ಸೇರಿದಂತೆ ಇತರ ಗಾಲ್ಫರ್‌ಗಳು ಅಕ್ಟೋಬರ್ 29ರಿಂದ ನವೆಂಬರ್ 5ರ ವರೆಗೆ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆಯಲಿರುವ ವಿಶ್ವ ಗಾಲ್ಫರ್‌ಗಳ ಚಾಂಪಿಯನ್‌ಷಿಪ್‌ಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ.
ಇಲ್ಲಿನ ಕರ್ನಾಟಕ ಗಾಲ್ಫ್ ಕೋರ್ಸ್‌ನಲ್ಲಿ ನಡೆದ `ಟೊಯೋಟಾ ಗಾಲ್ಫ್ ಉತ್ಸವ~ದ ಮೂರನೇ ಆವೃತ್ತಿಯಲ್ಲಿ ಈ ಗಾಲ್ಫರ್‌ಗಳು ಉತ್ತಮ ಪ್ರದರ್ಶನ ನೀಡಿದರು.

ಉತ್ಸವದ ಕೊನೆಯ ದಿನವಾದ ಭಾನುವಾರ ಶ್ರೀಧರ್ ಪ್ರಭಾವಿ ಪ್ರದರ್ಶನ ನೀಡಿದರು. ವೈಯಕ್ತಿಕವಾಗಿ ಒಟ್ಟು ಹೆಚ್ಚು ಪಾಯಿಂಟ್ ಗಳಿಸಿದ ಆಟಗಾರ ಎನ್ನುವ ಕೀರ್ತಿ ಪಡೆದರು. ಅದೇ ರೀತಿ 0-5ಹ್ಯಾಂಡಿ ಕ್ಯಾಪ್ ವಿಭಾಗದಲ್ಲಿ ಅಮಿತ್ ಲುಕ್ರಾ (35), ಕರ್ನಾಟಕದ ಎಸ್. ಚಿಕ್ಕರಂಗಪ್ಪ (33) ಹಾಗೂ ಶ್ರೀಧರ್ ರೆಡ್ಡಿ (32) ಗಳಿಸಿದರು.

6-10 ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಎಚ್.ಆರ್. ಶ್ರೀನಿವಾಸನ್ (52), ಜಿ.ನಮಿತ್ (35), ಶ್ರೀಪಾದ್ ರೇಣು (30) ಹಾಗೂ 6-20 ಹ್ಯಾಂಡಿಕ್ಯಾಪ್ ವಿಭಾಗದಲ್ಲಿ ಎ. ಆನಂದ್ ಕುಮಾರ್ (37), ವಿ. ಉಮೇಶ್ (33), ಟಿ. ಸುಕುಮಾರ್ (33) ಗಳಿಸಿ ವಿಶ್ವ ಗಾಲ್ಫರ್‌ಗಳ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ದಕ್ಕಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.