ಅಡಿಲೇಡ್ (ಐಎಎನ್‌ಎಸ್): ಆಸ್ಟ್ರೇಲಿಯಾದ ಹಿರಿಯ ಬ್ಯಾಟ್ಸ್‌ಮನ್ ಮೈಕ್ ಹಸ್ಸಿ ಭಾರತದ ಸಚಿನ್ ತೆಂಡೂಲ್ಕರ್ ಅವರನ್ನು `ಕ್ರಿಕೆಟ್ ದೇವರು~ ಎಂದು ಬಣ್ಣಿಸಿದ್ದಾರೆ. ಸಚಿನ್ ಇಷ್ಟು ಸುದೀರ್ಘ ಅವಧಿಯ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿರುವುದು ಅವರಿಗೆ ಅಚ್ಚರಿ ಉಂಟುಮಾಡಿದೆ.

`ಸಚಿನ್ ನಿಜವಾಗಿಯೂ ಒಬ್ಬ ಕ್ರಿಕೆಟ್ ದೇವರು. ಒತ್ತಡವನ್ನು ನಿಭಾಯಿಸುವ ಕಲೆ ಅವರಿಗೆ ತಿಳಿದಿದೆ. ಭಾರತದಂತಹ ಕ್ರಿಕೆಟ್ ಕ್ರೇಜ್ ದೇಶದಲ್ಲಿ ಅವರು ರಸ್ತೆಗಿಳಿದರೆಂದರೆ ಸಾವಿರಾರು ಅಭಿಮಾನಿಗಳು ಮುತ್ತಿಕ್ಕುವರು. ಇವೆಲ್ಲವನ್ನು ಮೆಟ್ಟಿನಿಂತು 20 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಲು ಸಾಧ್ಯವಾಗಿರುವುದು ಅಮೋಘ ಸಾಧನೆಯೇ ಸರಿ~ ಎಂದು ಹಸ್ಸಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

`ಪ್ರಸಕ್ತ ಸರಣಿಯಲ್ಲಿ ಸಚಿನ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಬ್ಯಾಟಿಂಗ್‌ನ್ನು ಹತ್ತಿರದಿಂದ ನೋಡುವುದು ಒಳ್ಳೆಯ ಅನುಭವ. ಸದ್ಯದಲ್ಲೇ ನೂರನೇ ಶತಕ ಗಳಿಸಲಿದ್ದಾರೆ~ ಎಂದರು ಹಸ್ಸಿ.

ಭಾರತ ತಂಡದ ಆಟಗಾರರು ನೆಟ್ ಪ್ರಾಕ್ಟೀಸ್‌ನಿಂದ ದೂರವುಳಿದಿರುವುದು ಹಲವರ ಟೀಕೆಗೆ ಕಾರಣವಾಗಿದೆ. ಆದರೆ ಈ ಕ್ರಮವನ್ನು ಹಸ್ಸಿ ಬೆಂಬಲಿಸಿದ್ದಾರೆ. `ಭಾರತ ತಂಡದಲ್ಲಿ ಅನುಭವಿ ಆಟಗಾರರು ಇದ್ದಾರೆ. ತಮ್ಮ ಜವಾಬ್ದಾರಿ ಏನೆಂಬುದು ಎಲ್ಲರಿಗೂ ತಿಳಿದಿದೆ. ನೆಟ್‌ನಲ್ಲಿ ದೀರ್ಘ ಅವಧಿ ಕಳೆಯುವ ಅಗತ್ಯವಿಲ್ಲ~ ಎಂದಿದ್ದಾರೆ.

ಮಹೇಂದ್ರ ಸಿಂಗ್ ದೋನಿ ಬಳಗ ಅಭ್ಯಾಸದ ಅವಧಿಯನ್ನು ಕಡೆಗಣಿಸಿರುವುದಕ್ಕೆ ಸುನಿಲ್ ಗಾವಸ್ಕರ್ ಒಳಗೊಂಡಂತೆ ಮಾಜಿ ಆಟಗಾರರು ಅತೃಪ್ತಿ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.