ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಗೆದ್ದ ಪಾಕ್

Last Updated 19 ಜನವರಿ 2011, 19:30 IST
ಅಕ್ಷರ ಗಾತ್ರ

ವೆಲಿಂಗ್ಟನ್ (ಎಪಿ): ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ಬುಧವಾರ ಇಲ್ಲಿ ಡ್ರಾದಲ್ಲಿ ಕೊನೆಗೊಂಡಿತು. ಪರಿಣಾಮ ಪಾಕ್ ತಂಡ ಎರಡು ಪಂದ್ಯಗಳ ಸರಣಿಯನ್ನು 1-0 ರಲ್ಲಿ ತನ್ನದಾಗಿಸಿಕೊಂಡಿತು. ಕಳೆದ ಐದು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನಕ್ಕೆ ಲಭಿಸುತ್ತಿರುವ ಮೊದಲ ಟೆಸ್ಟ್ ಸರಣಿ ಗೆಲುವು ಇದಾಗಿದೆ.

ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ಟೆಸ್ಟ್‌ನ ಕೊನೆಯ ದಿನ ಗೆಲುವಿಗೆ 274 ರನ್‌ಗಳ ಗುರಿ ಪಡೆದಿದ್ದ ಪಾಕಿಸ್ತಾನ ಪಂದ್ಯ ಡ್ರಾದಲ್ಲಿ ಕೊನೆಗೊಂಡಾಗ 92 ಓವರ್‌ಗಳಲ್ಲಿ 5 ವಿಕೆಟ್‌ಗೆ 226 ರನ್ ಗಳಿಸಿತ್ತು.ಯೂನಿಸ್ ಖಾನ್ (81, 155 ಎಸೆತ, 10 ಬೌಂ) ಮತ್ತು ಮಿಸ್ಬಾ ಉಲ್ ಹಕ್ (ಅಜೇಯ 70) ಅವರು ಆಕರ್ಷಕ ಅರ್ಧಶತಕ ಗಳಿಸಿ ಕಿವೀಸ್ ತಂಡದ ಗೆಲುವಿನ ಕನಸಿಗೆ ಅಡ್ಡಿಯಾದರು. ಒಂದು ಹಂತದಲ್ಲಿ ಪಾಕ್ ತಂಡ 42 ರನ್ ಗಳಿಸುವಷ್ಟರಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ಈ ಹಂತದಲ್ಲಿ ಜೊತೆಯಾದ ಮಿಸ್ಬಾ ಮತ್ತು ಯೂನಿಸ್ ನಾಲ್ಕನೇ ವಿಕೆಟ್‌ಗೆ 118 ರನ್‌ಗಳ ಜೊತೆಯಾಟ ನೀಡಿದರು. ಯೂನಿಸ್ ಔಟಾದ ಬಳಿಕ ಕ್ರೀಸ್‌ಗೆ ಆಗಮಿಸಿದ ಅಸದ್ ಶಫೀಕ್ (24) ಅವರು ಮಿಸ್ಬಾಗೆ ಉತ್ತಮ ಸಾಥ್ ನೀಡಿದರು. ತಾಳ್ಮೆಯ ಆಟವಾಡಿದ ಮಿಸ್ಬಾ 226 ಎಸೆತಗಳನ್ನು ಎದುರಿಸಿ ಏಳು ಬೌಂಡರಿ ಸಿಡಿಸಿದರು. ಹ್ಯಾಮಿಲ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪಾಕ್ 10 ವಿಕೆಟ್‌ಗಳ ಜಯ ಸಾಧಿಸಿತ್ತು.

ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 127.1 ಓವರ್‌ಗಳಲ್ಲಿ 356 ಹಾಗೂ ಎರಡನೇ ಇನಿಂಗ್ಸ್ 90.5 ಓವರ್‌ಗಳಲ್ಲಿ 293. ಪಾಕಿಸ್ತಾನ ಮೊದಲ ಇನಿಂಗ್ಸ್: 133 ಓವರ್‌ಗಳಲ್ಲಿ 376 ಮತ್ತು ಎರಡನೇ ಇನಿಂಗ್ಸ್ 92 ಓವರ್‌ಗಳಲ್ಲಿ 5 ವಿಕೆಟ್‌ಗೆ 226 (ಮೊಹಮ್ಮದ್ ಹಫೀಜ್ 32, ಯೂನಿಸ್ ಖಾನ್ 81, ಮಿಸ್ಬಾ ಉಲ್ ಹಕ್ ಔಟಾಗದೆ 70, ಕ್ರಿಸ್ ಮಾರ್ಟಿನ್ 63ಕ್ಕೆ 2, ಟಿಮ್ ಸೌಥಿ 49ಕ್ಕೆ 2).
ಫಲಿತಾಂಶ: ಪಂದ್ಯ ಡ್ರಾ, ಎರಡು ಪಂದ್ಯಗಳ ಸರಣಿಯಲ್ಲಿ ಪಾಕ್‌ಗೆ 1-0 ಅಂತರದ ಗೆಲುವು
ಪಂದ್ಯಶ್ರೇಷ್ಠ: ಮಿಸ್ಬಾ ಉಲ್ ಹಕ್

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT