ಅಹಮದಾಬಾದ್: ಭಾರತ ಕ್ರಿಕೆಟ್ ತಂಡದ ವೇಗಿ ಜಸ್ಪ್ರೀತ್ ಬೂಮ್ರಾ ಅವರ ತಾತ ಸಂತೋಕ್ ಸಿಂಗ್ ಬೂಮ್ರಾ ಅವರ ಮೃತ ದೇಹ ಭಾನುವಾರ ಸಾಬರಮತಿ ನದಿಯಲ್ಲಿ ಪತ್ತೆಯಾಗಿದೆ.
84 ವರ್ಷದ ಸಂತೋಕ್ ಸಿಂಗ್ ಬೂಮ್ರಾ ಅವರು ಶುಕ್ರವಾರದಿಂದ ಕಾಣೆಯಾಗಿರುವ ಬಗ್ಗೆ ಕುಟುಂಬ ಸದಸ್ಯರು ದೂರು ನೀಡಿದ್ದರು.
ಡಿ.5ರಂದು ಜಸ್ಪ್ರೀತ್ ಬೂಮ್ರಾ ಹುಟ್ಟುಹಬ್ಬದ ದಿನ ಅವರನ್ನು ಭೇಟಿಯಾಗಲು ಅಹಮದಾಬಾದ್ಗೆ ಬಂದಿದ್ದರು. ಆದರೆ, ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ, ಡಿ.8ರಿಂದ ಸಂತೋಕ್ ಸಿಂಗ್ ಕಾಣೆಯಾಗಿದ್ದರು.
ಡಿ.8ರಂದು ಜಾರ್ಖಂಡ್ನಲ್ಲಿರುವ ಬಲವಿಂದರ್ ಸಿಂಗ್ಗೆ ಕರೆ ಮಾಡಿದ್ದ ಸಂತೋಕ್ ಸಿಂಗ್, ‘ನನ್ನ ಮೃತ ಪತ್ನಿಯನ್ನು ಭೇಟಿ ಮಾಡಲು ಹೊರಟಿರುವುದಾಗಿ’ ತಿಳಿಸಿದ್ದರು.
‘ನಮ್ಮ ತಂದೆ ಜಸ್ಪ್ರೀತ್ ಬೂಮ್ರಾ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಜತೆಗೆ, ಜಸ್ಪ್ರೀತ್ನ ಫೋನ್ ನಂಬರ್ ಕೊಡಲು ಅವರು ತಾಯಿ ದಲ್ಜಿತ್ ಕೌರ್ ನಿರಾಕರಿಸಿದ್ದರು. ಇವೆಲ್ಲ ಸಂಗತಿಗಳಿಂದ ಬೇಸರಗೊಂಡಿದ್ದರು’ ಎಂದು ಸಂತೋಕ್ ಸಿಂಗ್ ಅವರ ಮಗಳು ರಾಜಿಂದರ್ ಕೌರ್ ಬೂಮ್ರಾ ತಿಳಿಸಿದ್ದಾರೆ.
ಸದ್ಯ ನಡೆಯುತ್ತಿರುವ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ಜಸ್ಪ್ರೀತ್ ಬೂಮ್ರಾ ಸ್ಥಾನ ಪಡೆದಿದ್ದಾರೆ.