ನವದೆಹಲಿ: ‘ಸೈನಾ ನೆಹ್ವಾಲ್ ಹಾಗೂ ಪಿ. ವಿ. ಸಿಂಧು ಅವರು ಬ್ಯಾಡ್ಮಿಂಟನ್ ಕ್ರೀಡೆಯ ಅಮೂಲ್ಯ ವಜ್ರಗಳು’ ಎಂದು ಭಾರತ ಬ್ಯಾಡ್ಮಿಂಟನ್ ತಂಡದ ಕೋಚ್ ಪುಲ್ಲೇಲ ಗೋಪಿಚಂದ್ ಹೊಗಳಿದರು.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.

‘ನಾನು ಕೋಚ್ ಆಗಿ ಇಬ್ಬರನ್ನೂ ಸಮಾನವಾಗಿ ಕಾಣುತ್ತೇನೆ. ಇತ್ತೀಚಿನ ಕೆಲವರ್ಷಗಳಿಂದ ಅವರು ಆಡುತ್ತಿರುವ ರೀತಿ ನನಗೆ ತೃಪ್ತಿ ತಂದಿದೆ. ಸೋಲು, ಗೆಲುವು ಸಾಮಾನ್ಯ. ಆದರೆ, ಆಟದ ಪ್ರತಿ ಹಂತದಲ್ಲೂ ತಮ್ಮ ಸಾಮರ್ಥ್ಯ ಹೆಚ್ಚು ಮಾಡಿಕೊಳ್ಳುತ್ತಿರುವ ಅವರಿಬ್ಬರೂ ಶ್ರೇಷ್ಠ ಕ್ರೀಡಾಪಟುಗಳು’ ಎಂದು ಹೇಳಿದರು.

‘ತರಬೇತಿ ವೇಳೆ ನಾನು ಅವರೊಂದಿಗೆ ತುಂಬ ಕಟ್ಟುನಿಟ್ಟಾಗಿ ವ್ಯವಹರಿಸುತ್ತೇನೆ. ನನಗೆ ಅವರು ಗೆಲ್ಲಬೇಕೆಂಬ ಉದ್ದೇಶ ಮಾತ್ರವಿರುತ್ತದೆ. ನನ್ನ ವಿದ್ಯಾರ್ಥಿಗಳು ಪ್ರತಿ ಟೂರ್ನಿಯಲ್ಲೂ ಶ್ರೇಷ್ಠ ಮಟ್ಟದ ಸಾಮರ್ಥ್ಯ ತೋರಬೇಕೆಂಬುದು ನನ್ನ ಆಕಾಂಕ್ಷೆ’ ಎಂದು ಅವರು ತಿಳಿಸಿದರು.

ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನ ಸಿಂಗಲ್ಸ್ ವಿಭಾಗ ಫೈನಲ್‌ನಲ್ಲಿ ಭಾರತದ ಉಭಯ ಆಟಗಾರ್ತಿಯರು ಮುಖಾಮುಖಿಯಾಗಿದ್ದರು. ಆ ಪಂದ್ಯದಲ್ಲಿ ಸಿಂಧು ಅವರನ್ನು ಸೋಲಿಸಿದ್ದ ಸೈನಾ ಚಿನ್ನದ ಪದಕ ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.