ಲೀಡ್ಸ್ (ಪಿಟಿಐ): ಬೆಂಗಳೂರಿನ ಚಿತ್ರಾ ಮಗಿಮೈರಾಜ್ ಇಲ್ಲಿ ನಡೆ ಯುತ್ತಿರುವ ವಿಶ್ವ ಸ್ನೂಕರ್ ಚಾಂಪಿ ಯನ್ಷಿಪ್ನ ಹಿರಿಯರ ವಿಭಾಗ ದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಬಿಲಿಯರ್ಡ್ಸ್ನಲ್ಲಿ ನಿರಾಸೆ ಅನುಭವಿಸಿದ್ದ ಚಿತ್ರಾ ಸ್ನೂಕರ್ನಲ್ಲಿ ಉತ್ತಮ ಪ್ರದರ್ಶನ ತೋರಿದರು. ಫೈನಲ್ ಪಂದ್ಯದಲ್ಲಿ ಅವರು 57-32, 76-16, 42-9 ಫ್ರೇಮುಗಳಿಂದ ಬೆಲಾರಸ್ನ ಅಲೆನಾ ಅಸ್ಮೋಲೊವಾ ಎದುರು ಗೆಲುವು ಸಾಧಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ಚಿತ್ರಾ 58-12, 45-33ರಲ್ಲಿ ಬೆಂಗಳೂರಿನವರೇ ಆದ ಉಮಾದೇವಿ ನಾಗರಾಜ್ ವಿರುದ್ಧ ಜಯ ಪಡೆದು ಪ್ರಶಸ್ತಿ ಘಟ್ಟಕ್ಕೆ ಲಗ್ಗೆ ಇಟ್ಟಿದ್ದರು.