ಬುಧವಾರ, ಸೆಪ್ಟೆಂಬರ್ 29, 2021
19 °C

‌‘ಸ್ಟಾರ್‌ ವಾರ್ಸ್‌’ ಖ್ಯಾತಿಯ ನಟ ಪೀಟರ್ ಮೇಹ್ಯೂ ನಿಧನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಾಸ್‌ ಏಂಜಲೀಸ್‌ : ‌‘ಸ್ಟಾರ್‌ ವಾರ್ಸ್‌’ ಚಿತ್ರದಲ್ಲಿ ವೋಕಿ ಯೋಧ ‘ಚ್ಯೂಬೆಕಾ’ ಪಾತ್ರದಲ್ಲಿ ನಟಿಸಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದ ನಟ ಪೀಟರ್ ಮೇಹ್ಯೂ (74) ಬುಧವಾರ ನಿಧನರಾಗಿದ್ದಾರೆ.

ಮೇಹ್ಯೂವ್ ಅವರ ಟೆಕ್ಸಾಸ್‌ನಲ್ಲಿನ ಅವರ ಮನೆಯಲ್ಲಿ ನಿಧನರಾಗಿರುವ ಸುದ್ದಿಯನ್ನು ಅವರ ಕುಟುಂಬದವರು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ. 

‘ಮೇಹ್ಯೂ ಅವರು ಚ್ಯೂಬೆಕಾ ಪಾತ್ರದಲ್ಲಿ ಮನಃ ಪೂರ್ವಕವಾಗಿ ನಟಿಸಿದ್ದರು. ‘ಸ್ಟಾರ್‌ ವಾರ್ಸ್‌’ ಚಿತ್ರತಂಡದೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದ ಅವರಿಗೆ ಅದು ಮತ್ತೊಂದು ಕುಟುಂಬವೇ ಆಗಿತ್ತು’ ಎಂದು ಕುಟುಂಬದವರು ಟ್ವೀಟ್‌ ಮಾಡಿದ್ದಾರೆ. 

ನೀಳಕಾಯದ ಬ್ರಿಟಿಷ್‌ ನಟ ಮೇಹ್ಯೂ ಅವರ ತಂದೆ ಪೊಲೀಸ್‌ ವೃತ್ತಿಯಲ್ಲಿದ್ದರು. ನಟನಾ ಕ್ಷೇತ್ರ ಪ್ರವೇಶಿಸುವ ಮೊದಲು ಮೇಹ್ಯೂವ್ ಅವರು ಆಸ್ಪತ್ರೆಯಲ್ಲಿ ಅಟೆಂಡರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. 

ಮೇಹ್ಯೂ ‘ಸಿನ್‌ಬ್ಯಾಡ್‌ ಆ್ಯಂಡ್‌ ದಿ ಐ ಆಫ್‌ ದಿ ಟೈಗರ್’ ಚಿತ್ರದಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚುವ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು