ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ವೀಸಾ ನೀತಿ: ಕೋರ್ಟ್‌ ಮೊರೆ ಹೋದ 65 ವಿ.ವಿಗಳು

Last Updated 24 ಡಿಸೆಂಬರ್ 2018, 17:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ವಿದೇಶಿ ವಿದ್ಯಾರ್ಥಿಗಳ ವೀಸಾ ನೀತಿಯಲ್ಲಿ ಬದಲಾವಣೆ ತಂದಿರುವ ಅಮೆರಿಕ ಡೊನಾಲ್ಡ್‌ ಟ್ರಂಪ್‌ ಆಡಳಿತದ ನಡೆಯನ್ನು ಹಾರ್ವರ್ಡ್‌, ಎಂಐಟಿ ಸೇರಿದಂತೆ ಅಮೆರಿಕದ 65 ಪ್ರಸಿದ್ಧ ವಿಶ್ವವಿದ್ಯಾಲಯಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿವೆ. ಟ್ರಂಪ್‌ ಆಡಳಿತವು ಆಗಸ್ಟ್‌ನಲ್ಲಿ ಹೊಸ ವೀಸಾ ನೀತಿಯನ್ನು ಘೋಷಿಸಿತ್ತು.

ಹೊಸ ವೀಸಾ ನೀತಿಯು ಅಮೆರಿಕದ ಉನ್ನತ ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ವವಿದ್ಯಾಲಯಗಳು ಆರೋಪಿಸಿವೆ.

ಹಿಂದಿನ ವೀಸಾ ನೀತಿಯ ಪ್ರಕಾರ ವಿದೇಶಿ ವಿದ್ಯಾರ್ಥಿಗಳು ತಮ್ಮ ವೀಸಾದ ಅವಧಿ ಮುಗಿದ ಆರು ತಿಂಗಳ ನಂತರವೂ ಅಮೆರಿಕದಲ್ಲಿ ನೆಲೆಸಿದ್ದರೆ ಅವರನ್ನು ‘ಕಾನೂನು ಬಾಹಿರವಾಗಿ ನೆಲೆಸಿದ್ದಾರೆ’ ಎಂದು ಗುರುತಿಸಿ ಒತ್ತಾಯಪೂರ್ವಕವಾಗಿ ಸ್ವದೇಶಕ್ಕೆ ಕಳುಹಿ ಸಲಾಗುತ್ತಿತ್ತು. ಆದರೆ ಆಗಸ್ಟ್‌ಗೂ ಮೊದಲು ಈ ರೀತಿಯ ಅವಕಾಶವಿರಲಿಲ್ಲ.

ವಿದ್ಯಾರ್ಥಿಗಳ ಕೋರ್ಸ್‌ ಮುಗಿದ ಬಳಿಕ ಅಥವಾ ವೀಸಾ ಅವಧಿ ಮುಗಿದ ತಕ್ಷಣ ಅವರನ್ನು ಅಕ್ರಮವಾಗಿ ನೆಲೆಸಿದವರೆಂದು ಗುರುತಿಸಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಅಲ್ಲದೆ ಅಮೆರಿಕಕ್ಕೆ ಮೂರು ವರ್ಷಗಳವರೆಗೆ ನಿಷೇಧ ಹೇರಲಾಗುತ್ತದೆ. ವೀಸಾ ಅವಧಿ ಮುಗಿದ ನಂತರ ಇಲ್ಲವೇ ವಿದ್ಯಾರ್ಥಿ ಪದವಿ ಅಧ್ಯಯನ ಮುಗಿದ ನಂತರದ ದಿನದಿಂದಲೇ ಅಕ್ರಮವಾಗಿ ನೆಲೆಸಿರುವ ಅವಧಿ ಆರಂಭವಾಗಿದೆ ಎಂದು ಗೃಹ ಇಲಾಖೆ ದಿನಾಂಕ ನಿಗದಿ ಮಾಡಬಹುದಾಗಿದೆ.

ಹೊಸ ನೀತಿ ವೀಸಾ ಹೊಂದಿರುವ ವಿದ್ಯಾರ್ಥಿಗಳಿಗೆ ಕಠಿಣ ಆಯ್ಕೆಯಾಗಿದೆ ಎಂದು ವಿಶ್ವವಿದ್ಯಾಲಯಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿವೆ. ವೀಸಾ ಹೊಂದಿರುವವರ ಮುಂದೆ ‘ಕಠಿಣ ಆಯ್ಕೆ’ ಇಡಲಾಗಿದೆ ಎಂದು ಹಾರ್ವರ್ಡ್‌, ಎಂಐಟಿ, ಕಾರ್ನೆಲ್‌, ಯಾಲೆ ಮತ್ತು ಪ್ರಿನ್ಸ್‌ಟನ್‌ ವಿವಿ ವಿದ್ಯಾರ್ಥಿಗಳು ಹೇಳಿದ್ದಾರೆ.

ಎಫ್‌,ಜೆ ಮತ್ತು ಎಂ. ಕೆಟಗರಿ ವೀಸಾ ಹೊಂದಿರುವ ವಿದ್ಯಾರ್ಥಿಗಳಿಗೆ ಮೂರು ಮತ್ತು 10 ವರ್ಷದ ಪ್ರವೇಶ ನಿಷೇಧ ಹೇರಲಾಗುತ್ತದೆ. ಇದನ್ನು ಪರಿಹರಿಸಿಕೊಳ್ಳಲು ಯಾವುದೇ ಅವಕಾಶವಿಲ್ಲದಾಗಿದೆ.

‘2017–18 ನೇ ಶೈಕ್ಷಣಿಕ ವರ್ಷದಲ್ಲಿ ಅಮೆರಿಕದ ಅರ್ಥವ್ಯವಸ್ಥೆಗೆ ವಿದೇಶಿ ವಿದ್ಯಾರ್ಥಿಗಳು ಕೋಟ್ಯಂತರ ಕೊಡುಗೆ ನೀಡಿದ್ದಾರೆ’ ಎಂದು ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿಗಳ ಸಲಹಾ ಸಂಘದ (ಎನ್‌ಎಎಫ್‌ಎಸ್‌ಎ) ಅಧ್ಯಯನವೊಂದು ತಿಳಿಸಿದೆ. ಅಲ್ಲದೆ ವಿದೇಶಿ ವಿದ್ಯಾರ್ಥಿಗಳ ಆರ್ಥಿಕ ವ್ಯವಹಾರದಿಂದ 4.55 ಲಕ್ಷಕ್ಕೂ ಹೆಚ್ಚು ಉದ್ಯೋಗಕ್ಕೆ ಬೆಂಬಲ ನೀಡಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT