ಸ್ವಾಮಿ ವಿವೇಕಾನಂದ ಕ್ರಾಂತಿ ಮಾಡಿದರು

7

ಸ್ವಾಮಿ ವಿವೇಕಾನಂದ ಕ್ರಾಂತಿ ಮಾಡಿದರು

Published:
Updated:
Deccan Herald

ಕೋಲಾರ: ‘ವಿಧ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವಾದರ್ಶ ಅಳವಡಿಸಿಕೊಳ್ಳುವುದರ ಜತೆಗೆ ಸಮಾಜಕ್ಕೂ ತಿಳಿಸಬೇಕು’ ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜು ಪ್ರಾಧ್ಯಾಪಕ ಜಿ.ಎಂ.ಪ್ರಕಾಶ್ ಹೇಳಿದರು.

ವಿವೇಕಾನಂದರ ಚಿಕಾಗೊ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ, ‘ವಿವೇಕಾನಂದರು ಚಿಕಾಗೊದಲ್ಲಿ ಮಾಡಿದ ಭಾಷಣ ಹಾಗೂ ಪ್ರಪಂಚದ ಎಲ್ಲಾ ಧರ್ಮೀಯರನ್ನು ಸಹೋದರರೇ ಎಂದು ಸಂಭೋದಿಸಿದ್ದು ಇಡೀ ವಿಶ್ವ ಭಾರತದತ್ತ ನೋಡುವಂತೆ ಮಾಡಿತು’ ಎಂದರು.

‘ವಿವೇಕಾನಂದರು ಭಾರತ ಪರ್ಯಟನೆ ನಡೆಸಿ ಧರ್ಮ, ಸಂಸ್ಕೃತಿ ಅರಿತರು. ಅವರ ದೇಶಪ್ರೇಮಕ್ಕೆ ಸಾಟಿಯಿಲ್ಲ. ಅವರ ಹೆಸರೇ ಒಂದು ಪ್ರೇರಣೆ. ಅವರು ಭಾಷಣದ ಮೂಲಕ ಜಗತ್ತಿನ ಗಮನ ಸೆಳೆದು ಬರವಣಿಗೆ ಮೂಲಕ ಕ್ರಾಂತಿ ಮಾಡಿದರು’ ಎಂದು ಪ್ರಾಧ್ಯಾಪಕ ನಂದೀಶ್ ಸ್ಮರಿಸಿದರು.

‘ವಿವೇಕಾನಂದರ ಜೀವನ ಅದೆಷ್ಟೋ ಮಂದಿಯ ಜೀವನ ಬದಲಿಸಿದೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಬರಹಗಳು ಸಾಕಷ್ಟು ಪ್ರಭಾವ ಬೀರಿದವು. ದೇಶ, ವಿದೇಶದ ಅನೇಕ ಇತಿಹಾಸಕಾರರು ಹಾಗೂ ಲೇಖಕರು ಇವರ ತತ್ವಗಳಿಂದ ಪ್ರಭಾವಿತರಾಗಿದ್ದಾರೆ. ಅಲ್ಲದೇ, ದೇಶದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇವರಿಂದ ಪ್ರಭಾವಿತರಾಗಿದ್ದರು’ ಎಂದು ಹೇಳಿದರು.

ದಾರಿ ದೀಪವಾದರು: ‘ಭಾರತದ ಉದ್ದಗಲಕ್ಕೂ ಬ್ರಿಟೀಷರ ಷರತ್ತುಗಳನ್ನು ಅಧ್ಯಯನ ಮಾಡಿ ನಂತರ ಅಮೆರಿಕ ಪ್ರವಾಸ ಕೈಗೊಂಡು ಚಿಕಾಗೊ ಸಮ್ಮೇಳನದಲ್ಲಿ ದೇಶದ ಧಾರ್ಮಿಕತೆ ಎತ್ತಿ ಹಿಡಿದರು. ದೇಶ ವಿದೇಶದಲ್ಲಿ ಹಿಂದೂ ಧರ್ಮದ ತತ್ವ ಬೋಧಿಸಿ ಯುವಕರಿಗೆ ದಾರಿ ದೀಪವಾದರು’ ಎಂದು ಎನ್‍ಎಸ್‍ಎಸ್ ಅಧಿಕಾರಿ ಹೇಮಮಾಲಿನಿ ಹೇಳಿದರು.

ಜಾಗೃತಿ ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು ವಿವೇಕಾನಂದರ ತತ್ವಾದರ್ಶದ ಬಗ್ಗೆ ಪ್ರಚಾರ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !